ತುಮಕೂರು : ತುಮಕೂರಿನ ಅಶ್ವಿನಿ ಆತ್ಮಹತ್ಯೆ ಕೇಸಿಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಅಶ್ವಿನಿ ಮೊಬೈಲ್ ನಲ್ಲಿ ಆತ್ಮಹತ್ಯೆ ರಹಸ್ಯ ಬಯಲಾಗಿದ್ದು, ಪುತ್ರಿ ಅಶ್ವಿನಿ ಲವ್ ಸ್ಟೋರಿ ಮತ್ತು ಕಿರುಕುಳ ಬೆಳಕಿಗೆ ಬಂದಿದೆ. ಹೊಟ್ಟೆ ನೋವಿನಿಂದ ಆತ್ಮಹತ್ಯೆ ಎಂದು ಪೋಷಕರು ಭಾವಿಸಿದ್ದರು. ಆದರೆ ಆತ್ಮಹತ್ಯೆಗು ಮುನ್ನ ಕುಣಿಕೆಯ ಜೊತೆ ಅಶ್ವಿನಿ ಸೆಲ್ಫಿ ತೆಗೆದುಕೊಂಡಿದ್ದಳು. ಇದಿಗ ಅಶ್ವಿನಿ ಮೊಬೈಲ್ ನಲ್ಲಿ ಮೆಸೇಜ್ ಮತ್ತು ಸಂಭಾಷಣೆ ಕುರಿತು ಪತ್ತೆಯಾಗಿದೆ. ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿರುವುದು ಪತ್ತೆಯಾಗಿದೆ.
ಅಶ್ವಿನಿ ತಮ್ಮದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದಳು ಆತ್ಮಹತ್ಯೆಗೆ ಮುನ್ನ ಅಶ್ವಿನಿ ಸೆಲ್ಫಿ ತೆಗೆದುಕೊಂಡಿದ್ದಳು. ಅಂತ್ಯಕ್ರಿಯೆ ಮುಗಿಸಿ ಬಂದಾಗ ಮೊಬೈಲ್ ನಲ್ಲಿ ಆತ್ಮಹತ್ಯೆ ರಹಸ್ಯ ಪತ್ತೆಯಾಗಿದೆ. ಪೋಷಕರಿಗೆ ಸಿಕ್ಕಿದ್ದ ಮೊಬೈಲ್ ನಲ್ಲಿ ತನ್ನ ಪ್ರಿಯಕರನಿಗೆ ಮಾಡಿದ ಮೆಸೇಜ್ ಪತ್ತೆಯಾಗಿದೆ ಸಿದ್ದನಕಟ್ಟೆ ಗ್ರಾಮದ ಅಶ್ವಿನಿ ಅದೇ ಗ್ರಾಮದ ಯುವಕನೊಂದಿಗೆ ಪ್ರೀತಿಸುತ್ತಿದ್ದಳು. ಆದರೆ ಯುವಕನಿಗೆ ಮತ್ತೋರ್ವ ಯುವತಿಯ ಜೊತೆಗೆ ಸಂಬಂಧ ಶಂಕೆ ವ್ಯಕ್ತವಾಗಿದೆ. ಈ ವಿಚಾರವಾಗಿ ಅಶ್ವಿನಿ ಮತ್ತು ಪ್ರಿಯಕರ ನಡುವೆ ಗಲಾಟೆ ಆಗಿದೆ.
ಗಲಾಟೆಯ ಬಳಿಕ ಅಶ್ವಿನಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕುಣಿಕೆ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದಾಳೆ. ಆದರೆ ಪೋಷಕರು ಹೊಟ್ಟೆ ನೋವಿನಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದರು ಆದರೆ ಪುತ್ರಿಯ ಅಂತ್ಯಕ್ರಿಯೆ ಬಳಿಕ ಮನೆಗೆ ಬಂದು ಮೊಬೈಲ್ ಪರಿಶೀಲನೆ ಮಾಡಿದಾಗ ಈ ಒಂದು ಘಟನೆ ಬೆಳಕಿಗೆ ಬಂದಿದೆ. ವಾಟ್ಸಾಪ್ ಮೆಸೇಜ್ ಆಧರಿಸಿ ಪೋಷಕರು ಇದೀಗ ದೂರು ನೀಡಿದ್ದಾರೆ ದೈಹಿಕ ಹಿಂಸೆ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.