ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಮನೆಯ ಕಟ್ಟಡ ಪರವಾನಗಿ ಪತ್ರ ಪಡೆಯಲು ಕಚೇರಿಗೆ ಅಲೆಬೇಕಿಲ್ಲ. ಇನ್ಮುಂದೆ ಸುಲಭವಾಗಲಿ ಈ ಪತ್ರ ಸಿಗಲಿದೆ.
ಹೌದು, ನಿಮ್ಮ ಮನೆಯ ಕಟ್ಟಡ ಪರವಾನಗಿ ಪತ್ರ ಪಡೆಯಲು ಗ್ರಾಮ ಪಂಚಾಯತಿ ಬಾಪೂಜಿ ಸೇವಾಕೇಂದ್ರಕ್ಕೆ ಭೇಟಿ ನೀಡಿ.ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕ್ಕೆ ಕರೆಮಾಡಿ. ಗ್ರಾಮ ಪಂಚಾಯತಿ ಸೇವೆಯನ್ನು ನಿಗದಿತ ಸಮಯದೊಳಗೆ ಪಡೆಯಿರಿ.
ನೀವು ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು
ಇ-ಸ್ವತ್ತು ನಮೂನೆ 9\11A\11B
ಕಟ್ಟಡ ನಕಾಶೆ
ಅಂದಾಜು ಪತ್ರ
ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ನಿಮ್ಮ ಆಸ್ತಿಯು ಅನುಮೋದಿತ ಲೇಔಟ್ ನ ಆಸ್ತಿ ಎಂದು ವರ್ಗಿಕರಿಸಿದ ಪ್ರಾರಂಭ ಪತ್ರ
ಅರ್ಜಿ ಶುಲ್ಕ 60 ರೂ. ಪಾವತಿಸಿ ಈ ಸೇವೆಯನ್ನು 60 ದಿನದೊಳಗೆ ಪಡೆಯಿರಿ.