ದಕ್ಷಿಣಕನ್ನಡ : ಅನನ್ಯ ಭಟ್ ನಾಪತ್ತೆ ಎಂದು ಸುಜಾತಾ ಭಟ್ ದೂರು ನೀಡಿರುವ ವಿಚಾರವಾಗಿ ಎಸ್ಐಟಿ ಅಧಿಕಾರಿಗಳ ಎದುರು ಇದೀಗ ಸುಜಾತ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ. ಅನನ್ಯ ಭಟ್ ನಾಪತ್ತೆ ಕುರಿತು ಸುಜಾತ ಭಟ್ ದೂರು ನೀಡಿದರು ಈ ವಿಚಾರವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಹಾಗಾಗಿ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದರು.
ನಿನ್ನೆ ಸುಜಾತಾ ಭಟ್ ಅವರಿಂದ ಅಧಿಕಾರಿಗಳು ಕೆಲವು ಮಹತ್ವದ ಹೇಳಿಕೆ ದಾಖಲಿಸಿಕೊಂಡಿದ್ದು, ಸುಜಾತ ಭಟ್ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಸುಜಾತ ಭಟ್ ಅವರಿಗೆ ಸೂಚಿಸಿತ್ತು. ಇದೀಗ ಸುಜಾತಾ ಭಟ್ ಎಸ್ಐಟಿ ಅಧಿಕಾರಿಗಳ ಎದುರಿಗೆ ವಿಚಾರಣೆ ಹಾಜರಾಗಿದ್ದಾರೆ. ಹಾಗಾಗಿ ಈ ಒಂದು ಅಧಿಕಾರಿಗಳ ತನಿಖೆ ತೀವ್ರ ಕುತೂಹಲ ಮೂಡಿಸಿದೆ. ಸುಜಾತ ಭಟ್ ಯಾವ ರೀತಿ ಹೇಳಿಕೆ ನೀಡಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.