ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಉದ್ವಿಗ್ನತೆಯನ್ನು ಪರಿಹರಿಸಿದ್ದೇನೆ ಮತ್ತು ಉಭಯ ಪ್ರತಿಸ್ಪರ್ಧಿಗಳ ಪರಮಾಣು ಯುದ್ದವನ್ನು ನಿಲ್ಲಿಸಿದ್ದೇನೆ ಎಂಬ ತಮ್ಮ ಹೇಳಿಕೆಯನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಚರಿಸಿದರು.
ನಾಲ್ಕು ದಿನಗಳ ಸಂಘರ್ಷದ ಸಮಯದಲ್ಲಿ “ಏಳು ಜೆಟ್ಗಳು ಅಥವಾ ಅದಕ್ಕಿಂತ ಹೆಚ್ಚಿನದನ್ನು” ಹೊಡೆದುರುಳಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ, ಅವರು ಯಾವ ದೇಶದ ವಿಮಾನವನ್ನು ಉಲ್ಲೇಖಿಸುತ್ತಿದ್ದಾರೆ ಎಂಬುದನ್ನು ನಿರ್ದಿಷ್ಟಪಡಿಸಲಿಲ್ಲ.
“ನಾನು ಅವರನ್ನು ನಿಲ್ಲಿಸದಿದ್ದರೆ ಭಾರತ ಮತ್ತು ಪಾಕಿಸ್ತಾನ ಪರಮಾಣು ಯುದ್ಧದಲ್ಲಿ ಕೊನೆಗೊಳ್ಳುತ್ತವೆ. ಅವರು ಹೋರಾಡುತ್ತಿರುವುದನ್ನು ನಾನು ನೋಡಿದೆ, ನಂತರ ಏಳು ಜೆಟ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ನೋಡಿದೆ. ‘ಅದು ಒಳ್ಳೆಯದಲ್ಲ, ಅದು ಬಹಳಷ್ಟು ಜೆಟ್ಗಳು’ ಎಂದು ನಾನು ಹೇಳಿದೆ” ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಒಪ್ಪುವಂತೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವೈಯಕ್ತಿಕವಾಗಿ ಒತ್ತಡ ಹೇರಿದ್ದೇನೆ ಎಂದು ಯುಎಸ್ ಅಧ್ಯಕ್ಷರು ಹೇಳಿದ್ದಾರೆ, “ಸಂಘರ್ಷವು ನಿಯಂತ್ರಣವನ್ನು ಮೀರುವ ಅಪಾಯವಿದ್ದರೆ ಕಡಿದಾದ ಸುಂಕವನ್ನು ವಿಧಿಸುವುದಾಗಿ ಎಚ್ಚರಿಸಿದ್ದೇನೆ” ಎಂದಿದ್ದಾರೆ