ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಮಹಿಳೆಯ ತಲೆ ಬುರುಡೆ ತಂದು ಇದು ಹೆಣ್ಣು ಮಗಳ ತಲೆ ಬುರುಡೆ ಎಂದು ಹೇಳಿಕೆ ನೀಡಿದ್ದ ಮಾಸ್ಕ್ ಮ್ಯಾನ್ ಚಿನ್ನಯನನ್ನು ಎಸ್ಐಟಿ ವಶಕ್ರ್ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದೆ. ಅಲ್ಲದೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೂ ಕೂಡ ನಿನ್ನೆಯಿಂದ SIT ಅಧಿಕಾರಿಗಳು ತೀವ್ರ ಶೋಧ ನೆಡೆಸಿದ್ದಾರೆ.
ಇದೀಗ ಬುರುಡೆ ಷಡ್ಯಂತ್ರದ ಹಿಂದೆ ಯಾರ್ಯಾರಿದ್ದಾರೆ ಇದರ ಸೂತ್ರಧಾರಿಗಳು ಯಾರು ಎನ್ನುವುದು ಎಸ್ಐಟಿ ಪತ್ತೆ ಹಚ್ಚುತ್ತಿದ್ದು, ನಿನ್ನೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಶೋಧ ನಡೆಸುವ ವೇಳೆ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದ್ದು, ಅದರಲ್ಲಿ ಹಲವು ಆಡಿಯೋ ಮತ್ತು ವಿಡಿಯೋಗಳು ಸಹ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಬುರುಡೆ ಷಡ್ಯಂತರದ ಸೂತ್ರಧಾರಿಗಳಿಗೆ ಎಸ್ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.