ಬೆಂಗಳೂರು : ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನಾ ವಿಚಾರವಾಗಿ ಜೆಡಿಎಸ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಾಲೆಳೆದಿದೆ.ಚಾಮುಂಡಿ ಬೆಟ್ಟ ಏನು ಹಿಂದುಗಳ ಆಸ್ತಿಯಲ್ಲ ಎಂದು ನಿನ್ನೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದೀಗ ಈ ಇಂದು ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು ಜೆಡಿಎಸ್ ತನ್ನ ಟ್ವೀಟ್ ಖಾತೆಯಲ್ಲಿ, ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ ಎಂಬ ಡಿಕೆ ಶಿವಕುಮಾರ್ ಹೇಳೀಕೆಗೆ ಆಪ್ತಮಿತ್ರ ಚಿತ್ರದಲ್ಲಿ ಗಂಗಾ ನಾಗವಲ್ಲಿಯಾಗಿ ಹಂತ ಹಂತವಾಗಿ ಬದಲಾಗುತ್ತಾಳೆ. ಆದರೆ ಡಿಕೆ ಶಿವಕುಮಾರ್ ನಾಗವಲ್ಲಿಗಿಂತಲೂ ಬಹುಬೇಗ ಬದಲಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ: ಡಿಕೆ ಶಿವಕುಮಾರ್
ಆಪ್ತಮಿತ್ರ ಚಿತ್ರದಲ್ಲಿ ಗಂಗಾ ನಾಗವಲ್ಲಿಯಾಗಿ ಹಂತ ಹಂತವಾಗಿ ಬದಲಾಗುತ್ತಾಳೆ.
ಆದರೆ @DKShivakumar ನಾಗವಲ್ಲಿಗಿಂತಲೂ ಬಹುಬೇಗ ಬದಲಾಗುತ್ತಿದ್ದಾರೆ.
— Janata Dal Secular (@JanataDal_S) August 27, 2025