ಬೆಂಗಳೂರು : ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ವಿವಿಧ ಸ್ವರೂಪ ಪಡೆಯುತ್ತಿದ್ದು, ಇದೀಗ ಧರ್ಮಸ್ಥಳ ದೇವಸ್ಥಾನದ ವಿರುದ್ಧ ಷ್ಯಡಂತ್ರದ ಆರೋಪ ಹೊತ್ತಿರುವ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ಹೌದು ಹುಬ್ಬಳ್ಳಿ ಮೂಲದ ರೌಡಿಶೀಟರ್ ಮದನ್ ಬುಗಾಡಿ ಎಂಬಾಂತನನ್ನ ಮಾನವಹಕ್ಕುಗಳ ಆಯೋಗದವರೆಂದು ಧರ್ಮಸ್ಥಳ ಪೊಲೀಸರಿಗೆ ಪರಿಚಯಿಸಿದ್ದಾರೆ ಎಂದು ಹಿಂದೂ ಮುಖಂಡ ಸುರೇಶ್ ಗೌಡ ದೂರು ದಾಖಲಿಸಿದ್ದಾರೆ. ಸುಳ್ಳು ಹೇಳಿ ಮಾನವ ಹಕ್ಕುಗಳ ಆಯೋಗವನ್ನ ಬಳಕೆ ಮಾಡಿಕೊಂಡಿದ್ದಾರೆ. ಇದು ಸರಿ ಅಲ್ಲ.
ಅಧಿಕಾರಿಗಳು ಕೂಡ ಶೀಘ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಗೂ ಈ ಸಂಬಂಧ ಶೀಘ್ರ ದೂರು ನೀಡುತ್ತೇವೆ. ಗಿರೀಶ್ ಮಟ್ಟಣ್ಣನವರ್ ಇಲಾಖೆಯ ಹೆಸರನ್ನು ಸುಳ್ಳು ಹೇಳಲು ಬಳಸಿಕೊಂಡಿದ್ದಾರೆಂದು ಆರೋಪಿಸಿ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ದೂರು ಪಡೆದಿರುವ ಅಧಿಕಾರಿಗಳು ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸುರೇಶ್ ಗೌಡ ತಿಳಿಸಿದರು.