ಮಂಡ್ಯ: ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಡಿದ್ದು ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ? ಎಂಬುದಾಗಿ ಮದ್ದೂರು ಶಾಸಕ ಕೆ.ಎಂ ಉದಯ್ ಪ್ರಶ್ನಿಸಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ. ಬೆಳ್ಳೂರು ಗ್ರಾಮದಲ್ಲಿ ಶಾಸಕ ಕದಲೂರು ಉದಯ್ ಮಾತನಾಡಿ, RSSನ ಗೀತೆ ಯಾವುದೋ ಸಂಸ್ಥೆಗೋ, ಪಕ್ಷಕ್ಕೋ, ಜಾತಿಗೋ ಸೇರಿದೆಯಾ? ಆಗಂತ ಯಾರಾದ್ರು ಅವರದ್ದು ಎಂದು ಬರೆದು ಕೊಟ್ಟಿದ್ದಾರಾ? ಆ ಗೀತೆನಾ ಯಾರು ಬೇಕಾದ್ರು ಎಲ್ಲಾದ್ರು ಹಾಡಬಹುದು ಎಂದರು.
ದಾಸಯ್ಯನು ಹಾಡ್ತಾನೆ ಓರ್ವ ಫೇಮಸ್ ಸಿಂಗರ್ ಕೂಡ ಹಾಡ್ತಾನೆ. ಅಗಂತ ಅದು ಆ ಪಕ್ಷಕ್ಕೋ ಸಂಸ್ಥೆಗೋ ಆ ಜಾತಿಗೋ ಸೀಮಿತಾ ಅಂತಲ್ಲ. ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ?. ಅದೇನ್ ಬರೆದು ಕೊಟ್ಬಿಟ್ಟಿದ್ದಾರಾ RSS ಗೆ ಅಂತಾ. ಈ ಬಗ್ಗೆ ಇವತ್ತು ಡಿಕೆಶಿ ಕ್ಷಮೆ ಕೇಳಿರೋದು ನನಗೆ ಗೊತ್ತಿಲ್ಲ.
ಆಗಂತ ಆ ಗೀತೆನಾ ಯಾರಿಗೂ ರಿಸರ್ವ್ ಅಲ್ಲ. ಯಾರು ಯಾವ ಗೀತೆ ಬೇಕಾದ್ರೆ ಹಾಡಬಹುದು, ಎಲ್ರೂ ಇಲ್ಲಿ ಸ್ವತಂತ್ರರರೇ. ಆಗಂತ ಯಾರು RSS ಗೋಸ್ಕರ ಗೀತೆನೋ ಶ್ಲೋಕನೋ ಬರೆದುಕೊಟ್ಟಿಲ್ಲ. ಆವರೇನೋ ಆಗಂತ ಹೇಳೋದ್ನ ರೂಡಿ ಮಾಡಿಸ್ಕೊಂಡಿರಬೇಕು ಅಷ್ಟೇ. ಆಗಂತ ಅದನ್ನು ಬೇರೆಯವರು ಹೇಳಬಾರದು ಅಂತಿಲ್ಲ. ಇವತ್ತು ಅವ್ರು ಕ್ಷೇಮೆ ಕೇಳಿರೋ ವಿಚಾರ ನನಗೆ ಗೊತ್ತಿಲ್ಲ ಎಂದರು.
ಕೊಕ್ಕರೆ ಬೆಳ್ಳೂರು ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ: ಶಾಸಕ ಕೆ.ಎಂ.ಉದಯ್
‘QR ಕೋಡ್’ ಸ್ಕ್ಯಾನ್ ಮಾಡಿ, ‘ಆಸ್ತಿ ಮಾಹಿತಿ, ನೋಂದಣಿ ಮತ್ತು ಬಾಡಿಗೆ ಒಪ್ಪಂದ’ ಪಡೆಯಿರಿ, ಸರ್ಕಾರದ ಹೊಸ ಯೋಜನೆ