ಬೆಂಗಳೂರು: ಇಂದು ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡಿ ಆದೇಶಿಸಲಾಗಿತ್ತು. ಈ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರನ್ನಾಗಿ ಎಂ.ಮಹೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಅಧಿಸೂಚನೆ ಹೊರಡಿಸಿದ್ದು, ದಿನಾಂಕ 26-08-2025ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿ ಆದೇಶಿಸಲಾಗಿದೆ ಎಂದಿದ್ದಾರೆ.
ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಐಎಎಸ್ ಅಧಿಕಾರಿ ಎಂ.ಮಹೇಶ್ವರ ರಾವ್, ಬಿಬಿಎಂಪಿ ಮುಖ್ಯ ಆಯುಕ್ತರು ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರನ್ನಾಗಿ ಅಧಿಕ ಪ್ರಭಾರದ ಮೇಲೆ ನೇಮಿಸಿ ಆದೇಶಿಸಿದ್ದಾರೆ.
‘QR ಕೋಡ್’ ಸ್ಕ್ಯಾನ್ ಮಾಡಿ, ‘ಆಸ್ತಿ ಮಾಹಿತಿ, ನೋಂದಣಿ ಮತ್ತು ಬಾಡಿಗೆ ಒಪ್ಪಂದ’ ಪಡೆಯಿರಿ, ಸರ್ಕಾರದ ಹೊಸ ಯೋಜನೆ
WATCH VIDEO : ನದಿಗೆ ಜಾರಿಬಿದ್ದ ಇಬ್ಬರನ್ನ ರಕ್ಷಿಸಿದ ಕೇಂದ್ರ ಸಚಿವ ‘ಕಿರಣ್ ರಿಜಿಜು’, ನೆಟ್ಟಿಗರಿಂದ ಭಾರೀ ಪ್ರಶಂಸೆ