ಲಡಾಖ್ : ಲಡಾಖ್‌ನಲ್ಲಿ ರಸ್ತೆಯಿಂದ ಜಾರಿ ನದಿಗೆ ಉರುಳಿದ ಇಬ್ಬರು ವ್ಯಕ್ತಿಗಳ ರಕ್ಷಣೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ವೈಯಕ್ತಿಕವಾಗಿ ಮುಂದಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಂಗಳವಾರ ಎಕ್ಸ್ ಪೋಸ್ಟ್’ನಲ್ಲಿ, ರಿಜಿಜು ತಮ್ಮ ಬೆಂಗಾವಲು ಪಡೆ ಡ್ರಾಸ್ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ನದಿಗೆ ಬಿದ್ದ ಮಿನಿ ಟ್ರಕ್’ನ್ನ ಅವರು ನೋಡಿದ್ದಾರೆ. ಅವರು ಹಂಚಿಕೊಂಡ ವೀಡಿಯೊದಲ್ಲಿ ಬೆಂಗಾವಲು ಪಡೆಯು ನಿಂತಾಗ ಭಾಗಶಃ ಮುಳುಗಿದ ವಾಹನದ ಛಾವಣಿಯ ಮೇಲೆ ಇಬ್ಬರು ಸಿಲುಕಿಕೊಂಡಿರುವುದನ್ನ ನೋಡಬಹುದು.
ಕ್ಲಿಪ್’ನಲ್ಲಿ ರಿಜಿಜು ನದಿಯ ದಡದ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನ ಮತ್ತು ಅಪಘಾತ ಹೇಗೆ ಸಂಭವಿಸಿತು ಎಂದು ಜನರನ್ನ ಕೇಳುತ್ತಿರುವುದನ್ನು ಮತ್ತು ಟ್ರಕ್’ನ ಬ್ರೇಕ್’ಗಳು ವಿಫಲವಾಗಿವೆಯೇ ಎಂದು ವಿಚಾರಿಸುತ್ತಿರುವುದನ್ನು ಕಾಣಬಹುದು. ಇನ್ನವ್ರು ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚಿಸುತ್ತಿರುವುದನ್ನ ಸಹ ಕಾಣಬಹುದು.
“ಲಡಾಖ್’ನ ಡ್ರಾಸ್ ತಲುಪುವ ಮೊದಲು, ನಮ್ಮ ಬೆಂಗಾವಲು ಪಡೆಯ ಮುಂದೆ ಒಂದು ವಾಹನ ನದಿಗೆ ಬಿದ್ದಿತು. ಅದೃಷ್ಟವಶಾತ್, ನಾವು ಸಮಯಕ್ಕೆ ಸರಿಯಾಗಿದ್ದೆವು ಮತ್ತು ಇಬ್ಬರೂ ಬದುಕುಳಿದರು” ಎಂದು ರಿಜಿಜು ಎಕ್ಸ್’ನಲ್ಲಿ ಬರೆದಿದ್ದಾರೆ. ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
Before reaching Drass in Ladakh, one vehicle fell into the river just ahead of our Convoy. Luckily, we were on time and both persons survived. https://t.co/23EfX6bcOd pic.twitter.com/0xkNkebcws
— Kiren Rijiju (@KirenRijiju) August 26, 2025
‘QR ಕೋಡ್’ ಸ್ಕ್ಯಾನ್ ಮಾಡಿ, ‘ಆಸ್ತಿ ಮಾಹಿತಿ, ನೋಂದಣಿ ಮತ್ತು ಬಾಡಿಗೆ ಒಪ್ಪಂದ’ ಪಡೆಯಿರಿ, ಸರ್ಕಾರದ ಹೊಸ ಯೋಜನೆ
SHOCKING : ರಾಜ್ಯದಲ್ಲಿ ‘ಜೀತ ಪದ್ಧತಿ’ ಇನ್ನು ಜೀವಂತ : ಬೆಂಗಳೂರಲ್ಲಿ 8 ಬಾಲಕರು ಸೇರಿ 35 ಕಾರ್ಮಿಕರ ರಕ್ಷಣೆ!
‘QR ಕೋಡ್’ ಸ್ಕ್ಯಾನ್ ಮಾಡಿ, ‘ಆಸ್ತಿ ಮಾಹಿತಿ, ನೋಂದಣಿ ಮತ್ತು ಬಾಡಿಗೆ ಒಪ್ಪಂದ’ ಪಡೆಯಿರಿ, ಸರ್ಕಾರದ ಹೊಸ ಯೋಜನೆ