ಬೆಂಗಳೂರು: ನಾಡಿನೆಲ್ಲೆಡೆ ಗಣೇಶ ಹಬ್ಬದ ತಯಾರಿ ಕಳೆಗಟ್ಟಿದೆ. ಈ ವೇಳೆಯಲ್ಲೇ ಪಿಒಪಿ ಗಣೇಶ ಮೂರ್ತಿ ಬದಲಾಗಿ ಮಣ್ಣಿನ ಗಣಪತಿಯನ್ನು ಪ್ರತಿಸ್ಠಾಪಿಸುವಂತೆ ಸರ್ಕಾರ ಸೂಚಿಸಿದೆ. ಒಂದು ವೇಳೆ ಪಿಒಪಿ ಗಣಪತಿ ಕೂರಿಸಿದರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಸರ್ಕಾರ ಎಚ್ಚರಿಸಿದೆ. ಹಾಗಾದ್ರೆ ಪಿಒಪಿ ಗಣೇಶ ಮೂರ್ತಿ ಪರಿಸರಕ್ಕೆ ಹಾನಿಕಾರಕ ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.
ಈ ಬಗ್ಗೆ ರಾಜ್ಯ ಸರ್ಕಾರವೇ ಮಾಹಿತಿ ನೀಡಿದ್ದು, ಪಿಒಪಿ ಗಣೇಶ ಮೂರ್ತಿಗಳ ಬದಲು ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಮನವಿ ಮಾಡಿದೆ. ಪಿಒಪಿ ಗಣಪತಿ ತಯಾರಿಸದಂತೆ, ಕೂರಿಸದಂತೆ ಖಡಕ್ ಸೂಚನೆ ನೀಡಿದೆ.
ಪಿಒಪಿ ಪರಿಸರಕ್ಕೆ ಹಾನಿಕಾರಕ ಹೇಗೆ.?
- ನೀರಿನಲ್ಲಿ ನಿಧಾನವಾಗಿ ಕರಗುತ್ತದೆ.
- ಪಿಒಪಿ ನೀರಿನಲ್ಲಿ ನಿಧಾನವಾಗಿ ಕರಗುವುದರಿಂದ ಆಮ್ಲಜನಕ ಪ್ರಮಾಣ ಇಳಿಕೆ
- ಲವಣಾಂಶದಿಂದ ನೀರಿನಲ್ಲಿ ಶಾಶ್ವತ ಗಡಸುತನ ಉಂಟಾಗಲಿದೆ.
- ರಾಸಾಯನಿಕಯುಕ್ತ ಬಣ್ಣಗಳಿಂದ ನೀರಿನ ಮೂಲಗಳು ಕಲುಷಿತಗೊಳ್ಳಲಿದೆ
- ಜಲಚರಗಳ ಜೀವಕ್ಕೆ ಕಂಟಕ
ಪರಿಸರ ಕಾಳಜಿಯೊಂದಿಗೆ ಗಣೇಶ ಹಬ್ಬವನ್ನು ಸಂಭ್ರಮಿಸೋಣ.
ಪಿಒಪಿ ಗಣೇಶ ಮೂರ್ತಿಗಳ ಬದಲು, ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸೋಣ.#GaneshChaturthi#EcoFriendlyFestival pic.twitter.com/XeYFoUhjQX
— DIPR Karnataka (@KarnatakaVarthe) August 25, 2025