ಬೆಳಗಾವಿ : ಬೆಳಗಾವಿಯಲ್ಲಿ ಬಿಮ್ಸ್ ಆಸ್ಪತ್ರೆಯ ವೈದ್ಯರು ಮಹಾ ಎಡವಟ್ಟು ಒಂದನ್ನು ಮಾಡಿದ್ದಾರೆ ವ್ಯಕ್ತಿಯ ಗಂಟಿನ ಆಪರೇಷನ್ ವೇಳೆ ಕರುಳು ಕಟ್ ಮಾಡಿರುವ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು ಹೊಟ್ಟೆ ನೋವೆಂದು ವ್ಯಕ್ತಿಯೊಬ್ಬರು ಜೂನ್ 20ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ವೈದ್ಯರು ವ್ಯಕ್ತಿಯ ಹೊಟ್ಟೆಯಲ್ಲಿ ಗಂಟು ಇರೋದು ಕಂಡು ಬಂದಿದೆ. ಬಳಿಕ ವ್ಯಕ್ತಿಗೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ ವೈದ್ಯರು ವ್ಯಕ್ತಿಗೆ ಆಪರೇಷನ್ ಮಾಡುವಾಗ ಗಂಟು ಸಮೇತ ಕರುಳು ಸಹ ಕಟ್ ಮಾಡಿದ್ದಾರೆ. ಮಹೇಶ್ ಮಾದರ್ ಎನ್ನುವ ವ್ಯಕ್ತಿಯ ಕರುಳು ಕಟ್ ಮಾಡಿದ್ದಾರೆ ಜೂನ್. 20 ರಂದು ಹೊಟ್ಟೆ ನೋವು ಎಂದು ಮಹೇಶ್ ಆಸ್ಪತ್ರೆಗೆ ದಾಖಲಾಗಿದ್ದರು.
ಅದೇ ದಿನವೇ ಬಿಮ್ಸ್ ವೈದ್ಯರು ಆಪರೇಷನ್ ಮಾಡಿದ್ದಾರೆ ಕರುಳು ಕಟ್ ಮಾಡಿ ವೈದ್ಯರು ಹೊಲಿಗೆ ಹಾಕಿ ಕಳುಹಿಸಿದ್ದಾರೆ ಮನೆಗೆ ಹೋದ ಬಳಿಕ ಮಹೇಶ್ ಗೆ ಮತ್ತೆ ವಿಪರೀತ ಹೊಟ್ಟೆ ನೋವು ಕಂಡು ಬಂದಿದೆ ಸ್ಕ್ಯಾನ್ ಮಾಡಿದಾಗ ಕರುಳು ಕಟ್ ಮಾಡಿದ್ದು ಬೆಳಕಿಗೆ ಬಂದಿದೆ. 10 ಲಕ್ಷ ಖರ್ಚು ಮಾಡಿ ಯುವಕ ಶಸ್ತ್ರಚಿಕಿತ್ಸೆ ಮಾಡಿಸಿದ್ದಾನೆ ಮಗನ ಚಿಕಿತ್ಸೆಗೆ ಯುವಕನ ತಂದೆ ಮನೆ ಮಾರಿದ್ದಾರೆ. ಬಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಇದೀಗ ಕುಟುಂಬಸ್ಥರು ಕ್ರಮಕ್ಕೆ ಆಗ್ರಹಿಸಿದ್ದಾರೆ.