ಬೆಂಗಳೂರು : ಬೆಂಗಳೂರಲ್ಲಿ ಬಿಎಂಟಿಸಿ ಚಾಲಕರ ಅಟ್ಟಹಾಸ ನಿಲ್ಲುತ್ತಿಲ್ಲ.ಇದೀಗ BMTC ಬಸ್ ಡಿಕ್ಕಿಯಾಗಿ ವ್ಯಕ್ತಿಯ ಸ್ಥಿತಿ ಗಂಭೀರ ಆಗಿರುವ ಘಟನೆ ತಾವರೆಕೆರೆ ನಿಲ್ದಾಣದಲ್ಲಿ ನಡೆದಿದೆ.ವ್ಯಕ್ತಿಗೆ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ ಈ ಒಂದು ಅಪಘಾತ ಸಂಭವಿಸಿದೆ. AK 7024 ನಂಬರ್ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ ಅನಾಹುತ ಸಂಭವಿಸಿದೆ.
ಇನ್ನು ಇಂದು ಬೆಳಿಗ್ಗೆ ತಾನೇ ನಗರದಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ಸಿಗೆ ಮತ್ತೊಂದು ಬಲಿಯಾಗಿದೆ. ಬಿಎಂಟಿಸಿ ಬಸ್ ಹರಿದು 11 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಕೆ ಆರ್ ಮಾರ್ಕೆಟ್ ಬಳಿಯಲ್ಲಿ ಈ ದುರ್ಘಟನೆ ನಡೆದಿದೆ. ತಂದೆ ಜೊತೆಗೆ ದ್ವಿಚಕ್ರ ವಾಹನದಲ್ಲಿ ಬಾಲಕ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ದೇವಸ್ಥಾನದ ಪೂಜಾರಿ ದಿಲೀಪ್ ಕುಮಾರ್ ಪುತ್ರ ಶಬರೀಶ್(11) ಸಾವನ್ನಪ್ಪಿದ್ದಾರೆ.