ಯಾದಗಿರಿ : ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ವಿಚಾರವಾಗಿ ಈಗಾಗಲೇ SIT ಅಧಿಕಾರಿಗಳು ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಅರೆಸ್ಟ್ ಮಾಡಿದ್ದಾರೆ. ಈ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು ಧರ್ಮಸ್ಥಳದ ಬಗ್ಗೆ ಷಡ್ಯಂತ್ರದ ಬಗ್ಗೆ ‘NIA’ ತನಿಖೆಯಾದ್ರೆ ತಪ್ಪಿಲ್ಲ ಎಂದು ತಿಳಿಸಿದರು.
ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, NIA ತನಿಖೆ ನಡೆದರೆ ಷಡ್ಯಂತ್ರದ ಹಿಂದೆ ಯಾರು ಇದ್ದಾರೆ ಎಂದು ಗೊತ್ತಾಗುತ್ತದೆ ಇದಕ್ಕೆ ಬೇಕಾದರೆ NIA ಕ್ಕಿಂತ ಉನ್ನತ ತನಿಖೆ ಆಗಬೇಕು ಜನರು ಬೇರೆ ಕೆಲಸ ಬಿಟ್ಟು ಧರ್ಮಸ್ಥಳದ ಬಗ್ಗೆ ನೋಡ್ತಾ ಕುಳಿತಿದ್ದಾರೆ. ನ್ಯಾಯಾಲಯ ತನಿಖೆಗೆ ಸೂಚಿಸಿದ್ದರಿಂದ ಸರ್ಕಾರ ಎಸ್ಐಟಿ ರಚನೆ ಮಾಡಿದೆ.
ಇದರಲ್ಲಿ ಎಡಪಂಥಿ ಹಾಗೂ ಬಲಪಂಥೀಯ ಎಂಬುದು ಯಾವುದು ಇಲ್ಲ ಇದು ದೇಶಕ್ಕೆ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ವಿಷಯ ಅಲ್ಲ ಧರ್ಮಸ್ಥಳದ ವಿಚಾರ ಒಂದು ಊರಿಗೆ ಸಂಬಂಧಿಸಿದಂತೆ ಅದನ್ನು ದೊಡ್ಡದು ಮಾಡಿ ಚರ್ಚೆ ಮಾಡುವುದು ಅನಗತ್ಯ. SIT ಅಧಿಕಾರಿಗಳು 15 ದಿನಗಳಿಂದ ತನಿಖೆ ಮಾಡುತ್ತಿದ್ದಾರೆ. ಕೋರ್ಟ್ ಆದೇಶ ಮಾಡದಿದ್ದರೆ ತನಿಖೆ ಯಾರು ನಡೆಸುತ್ತಿದ್ದರು? ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.