ಬೆಂಗಳೂರು : ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಟಿ ಹೆಚ್ ಓ ಒಬ್ಬರು ಸಾವನ್ನಪ್ಪಿದ್ದರೆ. ದೇವನಹಳ್ಳಿ ತಾಲೂಕು, ಆರೋಗ್ಯ ಅಧಿಕಾರಿ ಸಂಜಯ್ (52) ಇದೀಗ ಹೃದಯಘಾತದಿಂದ ಸಾವನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಟಿ ಎಚ್ ಓ ಆಗಿದ್ದ ಸಂಜಯ್ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯಯುಸಿರೆಳಿದಿದ್ದಾರೆ.
ಐದು ವರ್ಷಗಳಿಂದ ದೇವನಹಳ್ಳಿಯಲ್ಲಿ ಟಿ ಎಚ್ ಆಗಿ ಸಂಜಯ್ ಕಾರ್ಯ ನಿರ್ವಹಿಸುತ್ತಿದ್ದರು ಉತ್ತಮ ಸೇವೆಯಿಂದ ಸಂಜಯ್ ಜನಮನ್ನಣೆ ಗಳಿಸಿದ್ದರು. ಅಂತಾರಾಷ್ಟ್ರೀಯ ಏರ್ಪೋರ್ಟ್ ಸೇರಿದಂತೆ ದೇವನಹಳ್ಳಿ ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು. ಖಾಸಗಿ ಕಾರ್ಯಕ್ರಮ ನಿಮಿತ್ಯವಾಗಿ ಅವರು ಚೆನ್ನೈಗೆ ತೆರಳಿದಾಗ ತೀವ್ರ ಹೃದಯಘಾತದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಇದೀಗ ಚಿಕಿತ್ಸೆ ಫಲಿಸದೆ ಸಂಜಯ್ ಸಾವನಪ್ಪಿದ್ದಾರೆ ಮೃತ ಸಂಜಯ್ ಪತ್ನಿ ಮತ್ತು ಓರ್ವ ಮಗಳನ್ನು ಅಗಲಿದ್ದಾರೆ.