ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಸ್ಕ್‌ಮ್ಯಾನ್ ಚಿನ್ನಯ್ಯನ ಅಣ್ಣ ತಾನಾಸಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ತಾನಾಸಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮಾಡುತ್ತಿದ್ದ ಜಾಗಕ್ಕೆ ಹೋಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್‌ಐಟಿ (SIT) ವಿಚಾರಣೆಯ ಸಂದರ್ಭದಲ್ಲಿ ಚಿನ್ನಯ್ಯ ಅಣ್ಣ ತಾನಾಸಿಯ ಬಗ್ಗೆ ಕೆಲ ಮಾಹಿತಿ ತಿಳಿಸಿದ್ದ ಹಿನ್ನೆಲೆಯಲ್ಲಿ ಈಗ ಅಣ್ಣನನ್ನು ವಶಕ್ಕೆ ಪಡೆದಿದೆ. ಎಸ್‌ಐಟಿ ಚಿನ್ನಯ್ಯನ ವಿಚಾರಣೆ ನಡೆಸುತ್ತಿದ್ದ ವೇಳೆ ತಾನು ಹೆಣ ಹೂಳುತ್ತಿರುವ ವಿಚಾರ ಅಣ್ಣ ತಾನಾಸಿಗೂ ತಿಳಿದಿತ್ತು ಎಂದು ಹೇಳಿದ್ದ. ಈ ಕಾರಣಕ್ಕೆ ತಾನಾಸಿಯನ್ನು ಎಸ್‌ಐಟಿ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಬೆಳ್ತಂಗಡಿ ಕೋರ್ಟ್ ಈಗ ಚಿನ್ನಯ್ಯನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಶುಕ್ರವಾರ ವಿಚಾರಣೆಗೆ ಬಂದಿದ್ದ ಚಿನ್ನಯ್ಯನಿಗೆ ಎಸ್‌ಐಟಿ ಪೊಲೀಸರು ನಿರಂತರ ಪ್ರಶ್ನೆ ಕೇಳಿದ್ದರು. ರಾತ್ರಿಯೂ ಬೆಳ್ತಂಗಡಿ ಠಾಣೆಯಲ್ಲೇ ಇದ್ದ ಚಿನ್ನಯ್ಯನನ್ನು ಇಂದು ಬೆಳಗ್ಗೆ ಬಂಧಿಸಿದ್ದರು.