ದಕ್ಷಿಣಕನ್ನಡ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಅನಾಮಿಕ ದೂರುದಾರನನ್ನು ಎಸ್.ಐ.ಟಿ ಅಧಿಕಾರಿಗಳು ಬಂಧಿಸಿದ್ದಾರೆ. ಧರ್ಮಸ್ಥಳದಲ್ಲಿ ಶವ ಹೂತಿದೆ ಎಂಬ ಮಾಸ್ಕ್‌ಮ್ಯಾನ್‌ನ ದೂರಿನ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆಯ ನಂತರ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಬಂಧನವಾಗಿದೆ. ಬಳಿಕ ಚಿನ್ನಯ್ಯನನ್ನು ಬೆಳ್ತಂಗಡಿ ಸಿವಿಲ್ ಹಾಗು JMFC ಕೋರ್ಟ್ ಗೆ ಹಾಜರುಪಡಿಸಲಾಯಿತು.ಈ ವೇಳೆ ಜಡ್ಜ್ ವಿಜಯೇಂದ್ರ ಚಿನ್ನಯ್ಯನನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ಮಾಸ್ಕ್ಮ್ಯಾನ್ ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಬಂಧಿಸಿದ್ದಾರೆ. ತಲೆಬುರುಡೆ ಕೇಸ್ನಲ್ಲಿ ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿದ್ದು, ಆ ಮೂಲಕ ಸಾಕ್ಷಿ ಸಂರಕ್ಷಣಾ ಕಾಯ್ದೆಯಿಂದ ವಿಮುಖಗೊಳಿಸಲಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಿವಿಲ್ ಮತ್ತು JMFC ಕೋರ್ಟ್ಗೆ ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಹಾಜರುಪಡಿಸಿದರು.
ವಿಚಾರಣೆಯ ವೇಳೆ SIT ಅಧಿಕಾರಿಗಳು ಜಡ್ಜ್ ಗೆ ಚಿನ್ನಯ್ಯನನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿದರು. ನಾನು ಹೆಣ ಹೂತು ಹಾಕಿದ್ದು ನಿಜ ಎಂದು ಇದೆ ವೇಳೆ ಚಿನ್ನಯ್ಯ ಎದುರು ಹೇಳಿಕೆ ನೀಡಿದ್ದಾನೆ. ಎಲ್ಲ ವಿಚಾರಣೆಯ ಬಳಿಕ ಚಿನ್ನಯ್ಯನನ್ನು ಜಡ್ಜ್ ವಿಜಯೇಂದ್ರ ಅವರು, ಚೆನ್ನಯ್ಯನನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದರು