ಬೆಂಗಳೂರು: ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ) ತಿದ್ದುಪಡಿ 2025ರ ವಿಧೇಯಕವು ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದೆ.
ಈ ವಿಧೇಯಕದನ್ವಯ ಕೈಗಾರಿಕೆ, ಗಣಿಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಅಂತರ್ಜಲ ಬಳಕೆ ಮಾಡುವವರು, ಟ್ಯಾಂಕರ್ ನೀರು ಸರಬರಾಜು ಮಾಡುವವರು ಕಡ್ಡಾಯವಾಗಿ ನೀರಾಪೇಕ್ಷಣ ಪತ್ರ ಪಡೆಯಬೇಕು.
https://twitter.com/KarnatakaVarthe/status/1958826506668658804
ಕುಡಿಯುವ ನೀರು, ಗೃಹಬಳಕೆಗೆ, ರೈತರ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸುವುದಕ್ಕೆ ಅನುಮತಿ ಪಡೆಯುವುದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಅಂತರ್ಜಲ ಸಂರಕ್ಷಿಸುವ ನಿಟ್ಟಿನಲ್ಲಿ, ಕಾನೂನು ಉಲ್ಲಂಘನೆಯಾದರೆ ಕಠಿಣ ಶಿಕ್ಷೆವಿಧಿಸುವ ಅವಕಾಶವನ್ನೂ ಈ ವಿಧೇಯಕದಲ್ಲಿ ಕಲ್ಪಿಸಲಾಗಿದೆ ಎಂಬುದಾಗಿ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ತಿಳಿಸಿದ್ದಾರೆ.
ಎಚ್ಚರ.! ಇನ್ಮುಂದೆ ರಾಜ್ಯದಲ್ಲಿ ಹೀಗೆ ಮಾಡಿದ್ರೆ 3 ವರ್ಷ ಜೈಲು, 50,000 ದಂಡ ಫಿಕ್ಸ್
ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ 2.5 ಲಕ್ಷ ಹೊಸ ಉದ್ಯೋಗಗಳು ಲಭ್ಯ