ಬೆಂಗಳೂರು: ಕೆ ಎಸ್ ಆರ್ ಟಿಸಿ ಜಾಹೀರಾತು ಸಂ.1/2020 ದಿನಾಂಕ:14-02-2020 ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಹೆಚ್ಚುವರಿ 2ನೇ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ: 12-06-2025ರಂದು ಪ್ರಕಟಿಸಲಾಗಿತ್ತು.
ಮೇಲ್ಕಂಡ ಜಾಹೀರಾತಿನನ್ವಯ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಉಲ್ಲೇಖ-01 ರನ್ವಯ ಪ್ರಕಟಿಸಲಾದ ಅಂತಿಮ ಆಯ್ಕ್ಕೆಪಟ್ಟಿಯಲ್ಲಿ ಸ್ಥಾನ ಪಡೆದು ಕೌನ್ಸಿಲಿಂಗ್ ಮೂಲಕ ವಿಭಾಗಗಳಿಗೆ ನಿಯೋಜಿತರಾಗಿದ್ದ ಅಭ್ಯರ್ಥಿಗಳಲ್ಲಿ ವರದಿ ಮಾಡಿಕೊಳ್ಳದ 143 ಅಭ್ಯರ್ಥಿಗಳ ಸ್ಥಾನದಲ್ಲಿ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಸಿದ್ದಪಡಿಸಿ ನಿಗಮದ ಕೇಂದ್ರ ಕಛೇರಿ, ಶಾಂತಿ ನಗರ, ಬೆಂಗಳೂರು-27 ಸೂಚನಾ ಫಲಕದಲ್ಲಿ ಮತ್ತು ನಿಗಮದ ವೆಬ್-ಸೈಟ್ ಆದ www.ksrtcjobs.Karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ದಿನಾಂಕ: 23-08-2025 ರಂದು ಬೆಳಿಗ್ಗೆ 10.00 ಗಂಟೆಗೆ ನಿಗಮದ ಕೇಂದ್ರ ಕಛೇರಿ, ಶಾಂತಿನಗರ, ಬೆಂಗಳೂರು-27 ಇಲ್ಲಿ ನಡೆಸುವ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮೆರಿಟ್ ಆಧಾರದ ಮೇಲೆ ವಿಭಾಗ /ಘಟಕಗಳಿಗೆ ನೇರವಾಗಿ ನಿಯೋಜನೆ ಮಾಡಲಾಗುವುದು.
ವಿಶೇಷ ಸೂಚನೆ:
ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಎಸ್.ಎಂ.ಎಸ್ ಕಳುಹಿಸಲಾಗಿದೆ.
ಕೌನ್ಸಿಲಿಂಗ್‌ಗೆ ಹಾಜರಾಗದ ಅಭ್ಯರ್ಥಿಗಳನ್ನು ಖಾಲಿ ಉಳಿದ ಸ್ಥಾನಗಳಿಗೆ ನಿಗಮದ ವತಿಯಿಂದ ಸ್ಥಳ ನಿಯೋಜನೆ ಮಾಡಲಾಗುವುದು.
ಸ್ಥಳ ನಿಯೋಜನೆಯು ಗಣಕೀಕೃತವಾಗಿದ್ದು, ಸಂಪೂರ್ಣ ಪಾರದರ್ಶಕತೆಯಿಂದ ಕೂಡಿದ್ದು, ಯಾವುದೇ ಆಮಿಷ/ಅವ್ಯವಹಾರದಲ್ಲಿ ತೊಡಗಬಾರದೆಂದು ತಿಳಿಸಲಾಗಿದೆ.