ಭಾರತ ಸಂಚಾರ ನಿಗಮ ಲಿಮಿಟೆಡ್ ಬಳ್ಳಾರಿ ಜಿಲ್ಲಾ ಕಚೇರಿ ವತಿಯಿಂದ ರೂ.1/- ಗೆ 4ಜಿ ಸೇವೆಯ “ಫ್ರೀಡಂ ಪ್ಲಾನ್” ಪರಿಚಯಿಸುವ ನಿಟ್ಟಿನಲ್ಲಿ ಬುಧವಾರ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಆಗಸ್ಟ್-2025 ತಿಂಗಳಿಗೆ ಸೀಮಿತವಾದ ಅವಧಿಗೆ ಮಾತ್ರ ಗ್ರಾಹಕರು ರೂ.1/- ಗೆ 4ಜಿ ಸೇವೆ ಪಡೆಯಬಹುದು. ಈ ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 2ಜಿಬಿ ಡೇಟಾ ಮತ್ತು 100 ಎಸ್ಎಂಎಸ್, ಉಚಿತ ಸಿಮ್ ಪಡೆಯಬಹುದು (30 ದಿನಗಳಿಗೆ ಮಾತ್ರ). ಈ ಸೌಲಭ್ಯವನ್ನು ಸಾರ್ವಜನಿಕರು ಎಲ್ಲಾ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.
ಜಾಥಾವು ಬಿಎಸ್ಎನ್ಎಲ್ ಕಚೇರಿಯಿಂದ ಆರಂಭವಾಗಿ ಹೆಚ್.ಆರ್.ಗವಿಯಪ್ಪ ವೃತ್ತ, ಗಡಗಿ ಚೆನ್ನಪ್ಪ ವೃತ್ತ (ರಾಯಲ್ ಸರ್ಕಲ್) ಮೂಲಕ ಮರಳಿ ಬಿಎಸ್ಎನ್ಎಲ್ ಕಚೇರಿವರೆಗೆ ಬಂದು ಅಂತ್ಯಗೊAಡಿತು. ಜಾಥಾದಲ್ಲಿ ಕಚೇರಿಯ ಉಪಪ್ರಧಾನ ವ್ಯವಸ್ಥಾಪಕ, ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.