ರಾಜಸ್ಥಾನದ ಉದಯಪುರದಲ್ಲಿ ಮೂರು ಬೀದಿ ನಾಯಿಗಳು 5 ವರ್ಷದ ಮುಗ್ಧ ಮಗುವಿನ ಮೇಲೆ ದಾಳಿ ಮಾಡಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಆಗಸ್ಟ್ 17 ರಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ನಾಯಿಗಳು ಮಗುವನ್ನು ಸುತ್ತುವರೆದು ನೆಲಕ್ಕೆ ಎಸೆದಿದ್ದು ಸ್ಪಷ್ಟವಾಗಿ ಕಂಡುಬರುತ್ತದೆ. ಇದಾದ ನಂತರ, ಮಗುವನ್ನು ಎಳೆದುಕೊಂಡು ಹೋಗುತ್ತಲೇ ಇದ್ದವು, ಇದರಿಂದಾಗಿ ಮಗುವಿಗೆ ತೀವ್ರ ಗಾಯಗಳಾಗಿದ್ದವು.
ಮಗು ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದ್ದಕ್ಕಿದ್ದಂತೆ ಮೂರು ಬೀದಿ ನಾಯಿಗಳು ಅವನ ಮೇಲೆ ದಾಳಿ ಮಾಡಿದವು. ಮಗುವಿನ ಕಿರುಚಾಟ ಕೇಳಿ, ಅವನ ತಾಯಿ ತಕ್ಷಣ ಸ್ಥಳಕ್ಕೆ ತಲುಪಿದರು. ತಾಯಿ ಧೈರ್ಯ ತೋರಿಸಿ ನಾಯಿಗಳನ್ನು ಓಡಿಸಿ ತನ್ನ ಮಗುವನ್ನು ನಾಯಿಗಳ ಹಿಡಿತದಿಂದ ಬಿಡಿಸಿದರು. ತಾಯಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ತನ್ನ ಮಗುವಿನ ಜೀವವನ್ನು ಹೇಗೆ ಉಳಿಸಿಕೊಂಡಳು ಎಂಬುದನ್ನು ವೀಡಿಯೊದಲ್ಲಿ ಕಾಣಬಹುದು.
उदयपुर में एक मासूम पर तीन कुत्तों का हमला..
जरा सोचिए अगर मां दौड़कर बचाने नहीं आती तो क्या होता…#DogLovers #dogs pic.twitter.com/adZw1HUNnp— Bhawani Singh (@BhawaniSinghjpr) August 18, 2025