ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಮಾಜಿ ಸೈನಿಕನೊಬ್ಬ ಹಾರಿದ್ದಾನೆ. ನಂತ್ರ ಮನಸ್ಸು ಬದಲಿಸಿ ಮರದ ಕೊಂಬೆ ಹಿಡಿದುಕೊಂಡು ಜೋತಾಡಿ ನೆರವಿಗಾಗಿ ಮೊರೆಯಿಟ್ಟ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಬಳಿಯ ಕಾವೇರಿ ನದಿಗೆ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಮಾಜಿ ಸೈನಿಕ ಭೃಂಗೇಶ್ ಹಾರಿದ್ದಾನೆ. ಆದರೇ ಕಾವೇರಿ ನದಿಗೆ ಹಾರಿದ ಬಳಿಕ ಮನಸ್ಸು ಬದಲಾಗಿ ಬದುಕೋದಕ್ಕೆ ನಿರ್ಧರಿಸಿದ್ದಾನೆ.
ಬದುಕೋದಕ್ಕೆ ನಿರ್ಧರಿಸಿದಂತ ಮಾಜಿ ಸೈನಿಕ ಭೃಂಗೇಶ್ ಸಮೀಪದಲ್ಲೇ ಇದ್ದಂತ ಮರದ ಕೊಂಬೆ ಹಿಡಿದುಕೊಂಡು ರಕ್ಷಣೆಗಾಗಿ ಮೊರೆಯಿಟ್ಟಿದ್ದಾನೆ. ಈ ಮೊರೆಯನ್ನು ಕೇಳಿದಂತ ಅಂಬಿಗನೊಬ್ಬ ಮಾಜಿ ಸೈನಿಕ ಭೃಂಗೇಶ್ ರಕ್ಷಿಸಿದ್ದಾರೆ.
ಅಂದಹಾಗೇ ಸಾಲದ ಬಾಧೆಯಿಂದ ಮಾಜಿ ಸೈನಿಕ ಭೃಂಗೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಾವೇರಿ ನದಿ ದಡಕ್ಕೆ ತೆರಳಿ ನೀರಿಗೆ ಜಿಗಿದಿದ್ದಾರೆ. ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ಕೊಚ್ಚಿ ಹೋಗಿದ್ದಾರೆ. ನಂತ್ರ ಮನಸ್ಸು ಬದಲಿಸಿ ಮರದ ಕೊಂಬೆಯನ್ನು ಹಿಡಿದುಕೊಂಡು ರಕ್ಷಣೆಗಾಗಿ ಮೊರೆಯಿಟ್ಟಾಗ ಅಂಬಿಗನ ಸಹಾಯದಿಂದ ಬದುಕಿ ಬಂದಿದ್ದಾರೆ.
BREAKING: ಬೆಂಗಳೂರು ಸಿಲಿಂಡರ್ ಸ್ಪೋಟ: ಇಂದು ಚಿಕಿತ್ಸೆ ಫಲಿಸದೇ ಇಬ್ಬರು ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನಾಳೆ, ನಾಡಿದ್ದು ಬಳ್ಳಾರಿ ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut