ಬೆಂಗಳೂರು: ಕರ್ನಾಟಕ ಸರ್ಕಾರ ಕೊಡಮಾಡುವ ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆಯಾಗಿರುವ ತೋಂಬತ್ತೈದು ವರ್ಷದ ಹಿರಿಯ ಪತ್ರಕರ್ತ ಕಲ್ಲೇಶಿವೋತ್ತಮರಾವ್ ಅವರಿಗೆ ಅಭಿನಂದನೆಗಳು.
ಸುವರ್ಣ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರಸಂಘ (ಕೆಯುಡಬ್ಲ್ಯೂಜೆ) ಅವರ ಮನೆಗೆ ತೆರಳಿ ಮನೆಯಂಗಳದಲ್ಲಿ ಅವರನ್ನು ಗೌರವಿಸಿದ್ದು ಅಭಿಮಾನದ ಸಂಗತಿಯಾಗಿತ್ತು. ಮನೆಯಂಗಳದಲ್ಲಿ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ನಮನ ಕಾರ್ಯಕ್ರಮವನ್ನು ಕಲ್ಲೇ ಅವರ ಮನೆಯಿಂದಲೇ ಪ್ರಾರಂಭಿಸಲಾಗಿತ್ತು.
ಅಷ್ಟೂ ಪತ್ರಕರ್ತರ ಅನುಭವವನ್ನು ಅಮೃತಬೀಜ ಕೃತಿ ಮೂಲಕ ಕೆಯುಡಬ್ಲ್ಯೂಜೆ ದಾಖಲೀಕರಣ ಮಾಡಿದ್ದು ಈ ಕೃತಿಯನ್ನು ಬಹುರೂಪಿ ಸಂಸ್ಥೆ ಹೊರತಂದಿದೆ.
ಹಿರಿಯ ಪತ್ರಕರ್ತರಾದ ಕಲ್ಲೇ ಶಿವೋತ್ತಮರಾವ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಭಿನಂದಿಸಿದ್ದಾರೆ.
ಮದ್ದೂರು ಬಸ್ ನಿಲ್ದಾಣದ ಬಳಿ ಬೈಕ್ ಗೆ KSRTC ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ: ಈವರೆಗೆ 6.24 ಲಕ್ಷ ಜನರಿಂದ ವೀಕ್ಷಣೆ