ಮಂಡ್ಯ : ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಮೃತ ಪಟ್ಟು ಮತ್ತೋಬ್ಬ ಗಾಯಗೊಂಡಿರುವ ಘಟನೆ ಮದ್ದೂರು ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ. ಚನ್ನಪಟ್ಟಣದ ಜೀವನ್ ಪುರ್ ನಗರದ ಮೆಹರಾನ್ ಖಾನ್ (20) ಮೃತ ಪಟ್ಟ ಯುವಕನಾಗಿದ್ದಾನೆ.
ಚನ್ನಪಟ್ಟಣದಿಂದ ಮೆಹರಾನ್ ಖಾನ್ ಮತ್ತು ಆತನ ಸ್ನೇಹಿತ ಮಹಮದ್ ಖಾಸಿಂ ಇಬ್ಬರು ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ ( KA-02-EU-9389 ) ಟಿ.ನರಸೀಪುರದ ಕುರಿ ಸಂತೆಗೆ ಹೋಗುತ್ತಿದ್ದ ವೇಳೆ ಮದ್ದೂರು ಸರ್ಕಾರಿ ಬಸ್ ನಿಲ್ದಾಣದ ಬಳಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ (KA-09-F-5060) ಸಾರಿಗೆ ಬಸ್ (ಮೈಸೂರು ಡಿಪೋ) ಮದ್ದೂರು ಬಸ್ ನಿಲ್ದಾಣಕ್ಕೆ ಹೋಗುವ ವೇಳೆ ತಿರುವುನಲ್ಲಿ ಬಂದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೆಹರಾನ್ ಖಾನ್ ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ.
ಪ್ರಯಾಣಿಕರು ಹಾಗೂ ಸಾರ್ವಜನಿಕರು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಅಷ್ಟರಲ್ಲಿ ಮಹರಾನ್ ಖಾನ್ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಮದ್ದೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೆಹರಾನ್ ಖಾನ್ ನ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಲಾಯಿತು.
ವರದಿ : ಗಿರೀಶ್ ರಾಜ್, ಮಂಡ್ಯ
ಬೆಂಗಳೂರು ಸಿಲಿಂಡರ್ ಸ್ಪೋಟ ಕೇಸ್: ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಸಾವು
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ: ಈವರೆಗೆ 6.24 ಲಕ್ಷ ಜನರಿಂದ ವೀಕ್ಷಣೆ