ಬೆಂಗಳೂರು: 218ನೇ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ ಬಿದ್ದಿದೆ. ಈ ಬಾರಿಯ ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ ದೊರೆತಿದೆ. ಈವರೆಗೆ ಬರೋಬ್ಬರಿ 5.80 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ.
ಈ ಕುರಿತಂತೆ ಲಾಲ್ ಬಾಗ್ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಮಾಹಿತಿ ಹಂಚಿಕೊಂಡಿದ್ದು, 218ನೇ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್.7ರಿಂದ 18ರ ಇಂದಿನವರೆಗೆ ಆಯೋಜಿಸಲಾಗಿತ್ತು ಎಂದಿದ್ದಾರೆ.
ಕೊನೆಯ ದಿನವಾದಂತ ಇಂದು ಪ್ಲವರ್ ಶೋವನ್ನುವಯಸ್ಕರು— 7960, ಮಕ್ಕಳು — 2400, ಶಾಲಾ ಮಕ್ಕಳು 16,950 ಸೇರಿದಂತೆ ಒಟ್ಟು — 27,310 ಮಂದಿ ವೀಕ್ಷಣೆ ಮಾಡಿದ್ದಾರೆ. ಇದರ ಒಟ್ಟು ಮೊತ್ತ ರೂ 3,45,000 ಆಗಿರುತ್ತದೆ ಎಂದು ಹೇಳಿದ್ದಾರೆ.
ಕಳೆದ 12 ದಿವಸಗಳ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ ವೀಕ್ಷರ ಸಂಖ್ಯೆ ಒಟ್ಟು 6.24 ಲಕ್ಷಗಳ ಮಂದಿಯಾಗಿದ್ದಾರೆ. ಇದರಿಂದ ಸಂಗ್ರಹವಾದ ಒಟ್ಟು ಮೊತ್ತ ರೂ 2,78,45,560 ಅಂದರೇ ಪ್ರವೇಶ ಶುಲ್ಕ ರೂ 2,4732 ಕೋಟಿಗಳು ,ಪ್ರಾದರ್ಶಿಕೆಗಳ ಶುಲ್ಕ ರೂ 31.14 ಲಕ್ಷಗಳು ಎಂದು ತಿಳಿಸಿದ್ದಾರೆ.
ಇಂದು ಬೆಂಗಳೂರು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆಬಿದ್ದಿದೆ. ಈ ಪ್ಲವರ್ ಶೋಗೆ ಸಹಕರಿಸಿದ ಎಲ್ಲರಿಗೆ ಧನ್ಯವಾದಗಳನ್ನು ಲಾಲ್ ಬಾಗ್ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದಂತ ಡಾ.ಎಂ ಜಗದೀಶ್ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
ಇ-ಪೌತಿ ಖಾತಾ ಆಂದೋಲನದ ಪ್ರಯೋಜನ ಪಡೆಯಿರಿ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಛಾಯ್ಸ್ ಆಯ್ಕೆಗೆ ಸಮಯ ವಿಸ್ತರಿಸಿದ ಕೆಇಎ