ವಿಜಯಪುರ : ವಿಜಯಪುರ ಜಿಲ್ಲೆಯ ಅಲ್ಮೆಲ್ ನಲ್ಲಿ ಇಂದು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಮುಸ್ಲಿಂ ಯುವಕರು ಶಾಸಕ ಯತ್ನಾಳ್ ಕಾರು ತಡೆದು ಕಪ್ಪುಬಟ್ಟೆ ಪ್ರದರ್ಶಿಸಿದ್ದರು. ಇದೀಗ ಕಪ್ಪು ಬಟ್ಟೆ ಪ್ರದರ್ಶಿಸಿದ್ದ ಯುವಕರು ಅರೆಸ್ಟ್ ಆಗಿದ್ದಾರೆ.
ಹೌದು ಕಳೆದ ಕೆಲವು ದಿನಗಳ ಹಿಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಂ ಯುವತಿಯರನ್ನು ಹಿಂದೂ ಯುವಕರು ಮದುವೆಯಾದರೆ 5 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಒಂದು ಹೇಳಿಕೆಯನ್ನು ಖಂಡಿಸಿ ಶಾಸಕ ಯತ್ನಾಳ್ಗೆ ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ. ಯತ್ನಾಳ್ಗೆ ಕಪ್ಪು ಬಟ್ಟೆ ಪ್ರದರ್ಶಿಸಿದ ಮುಸ್ಲಿಂ ಯುವಕರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಆಲ್ಮೇಲ್ ಪಟ್ಟಣದಲ್ಲಿ ಇಂದು ಈ ಒಂದು ಘಟನೆ ನಡೆದಿತ್ತು. ಶಾಸಕ ಯತ್ನಾಳ್ ಕಾರಿಗೆ ಅಡ್ಡ ಬಂದು ಕಪ್ಪುಬಟ್ಟೆ ಪ್ರದರ್ಶಿಸಿದ್ದರು. ಪೊಲೀಸರ ವಿರುದ್ಧ ಯುವಕರ ಕುಟುಂಬದ ಮಹಿಳೆಯರು ಕಿಡಿ ಕಾರಿದ್ದಾರೆ. ಕಾರ್ಯಕ್ರಮ ಸ್ಥಳಕ್ಕೆ ಮುಸ್ಲಿಂ ಮಹಿಳೆಯರು ಆಗಮಿಸಿದ್ದಾರೆ ಶಾಸಕ ಯತ್ನಾಳ ಭೇಟಿಗೆ ಇವಳು ಪೊಲೀಸರು ಯಾವುದೇ ಅವಕಾಶ ಕೊಡಲಿಲ್ಲ ಮಹಿಳೆಯರನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಮುಸ್ಲಿಂ ಸಮುದಾಯದ ಜನರು ಇದೀಗ ಜಮಾವಣೆಗೊಂಡಿದ್ದಾರೆ.