ಬೆಂಗಳೂರು: ನಗರದಲ್ಲಿ ತ್ರಿಕೋನ ಪ್ರೇಮಕಥೆಯಿಂದಾಗಿ ಹೊಸ ಬಾಯ್ ಫ್ರೆಂಡ್ ಗೆ ಹಳೆಯ ಲವರ್ ಚಾಕುವಿನಿಂದ ಇರಿದು ಗಾಯಗೊಳಿಸಿರುವಂತ ಘಟನೆ ನಡೆದಿದೆ.
ಪ್ರೇಯಸಿ ಮತ್ತೊಬ್ಬನನ್ನು ಪ್ರೀತಿಸಿದ್ದಕ್ಕೆ ಆತನಿಗೆ ಹಳೆಯ ಲವರ್ ಚಾಕುವಿನಿಂದ ಇರಿದು ಗಾಯಗೊಳಿಸಿದಂತ ಘಟನೆ ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ನಡೆದಿದೆ. ಹೊಸ ಬಾಯ್ ಫ್ರೆಂಡ್ ಗೆ ಹಳೇ ಲವರ್ ಚಾಕುವಿನಿಂದ ಇರಿದಿದ್ದಾರೆ.
ಬೆಂಗಳೂರಿನ ವೈಯಾಲಿ ಕಾವಲ್ ನಲ್ಲಿ ತ್ರಿಕೋನ ಪ್ರೇಮಕಥೆಯ ಸುದ್ದಿ ಇದಾಗಿದೆ. ಯತೀಶ್ ಎಂಬ ಯುವಕನನ್ನು ಯುವತಿಯೊಬ್ಬಳು ಲವ್ ಮಾಡುತ್ತಿದ್ದಳು. ಬಳಿಕ ಯತೀಶ್ ಬಿಟ್ಟು ಚಂದನ್ ಜೊತೆ ಯುವತಿಗೆ ಲವ್ ಆಗಿತ್ತು. ಈ ಕಾರಣದಿಂದ ಸಿಟ್ಟಾದಂತ ಹಳೇ ಲವರ್ ಯತೀಶ್ ಎಂಬಾತ ಚಂದನ್ ಎಂಬುವನಿಗೆ ಚಾಕುವಿನಿಂದ ಇರಿದಿದ್ದಾನೆ.
ಚಂದನ್ ಗೆ ಚಾಕು ಇರಿದು ಯತೀಶ್ ಮತ್ತು ಗ್ಯಾಂಗ್ ಕ್ರೌರ್ಯ ಮೆರೆದಿದೆ. ಪ್ರೇಯಸಿ ಮತ್ತೊಬ್ಬನ ಪ್ರೀತಿಸಿದ್ದಕ್ಕೆ ಆತನಿಗೆ ಚಾಕುವಿನಿಂದ ಇರಿಯಲಾಗಿದೆ. ಚಂದನ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸ್ಥಿತಿ ಗಂಭೀರಗೊಂಡಿರುವುದಾಗಿ ಹೇಳಲಾಗುತ್ತಿದೆ. ಈ ಸಂಬಂಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತಗಳ್ಳತನ ಆರೋಪ: 7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ, ಇಲ್ಲವೇ ಕ್ಷಮೆ ಕೇಳಲು ರಾಹುಲ್ ಗಾಂಧಿಗೆ ECI ಸೂಚನೆ
ಪರಿಷ್ಕೃತ ಜಿಎಸ್ಟಿ ದರಗಳಿಂದ ಯಾವ ವಸ್ತುಗಳು ಅಗ್ಗವಾಗಬಹುದು? ಇಲ್ಲಿದೆ ಡೀಟೆಲ್ಸ್ | GST bonanza