ವಿಜಯಪುರ : ಮುಸ್ಲಿಂ ಯುವತಿಯರನ್ನು ಹಿಂದು ಯುವಕರು ಮದುವೆಯಾದರೆ 5 ಲಕ್ಷ ಬಹುಮಾನ ಘೋಷಣೆ ನೀಡುವುದಾಗಿ ವಿಜಯಪುರ ನಗರ ಉಚ್ಛಾಟಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾಧಾತ್ಮಕ ಹೇಳಿಕೆ ನೀಡಿದರು. ಇದೀಗ ಈ ಒಂದು ಹೇಳಿಕೆಯಿಂದ ವಿಜಯಪುರದಲ್ಲಿ ಯುವಕರು ಕಾರು ಅಡ್ಡಗಟ್ಟಿರುವ ಘಟನೆ ನಡೆದಿದೆ.
ಹೌದು ವಿಜಯಪುರದಲ್ಲಿ ಶಾಸಕ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಅನ್ಯಕೋಮೀನ ಯುವತಿ ಪ್ರೀತಿಸಿ ಮದುವೆ ಆದರೆ 5 ಲಕ್ಷ ಬಹುಮಾನ ನೀಡುವುದಾಗಿ ಹೇಳಿಕೆ ನೀಡಿದ್ದರು. ಈ ರೀತಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಯತ್ನಾಳ ವಿರುದ್ಧ ಕೆರಳಿ ಕೆಂಡವಾಗಿದ್ದ ಯುವಕರು ಯತ್ನಾಳ್ ಕಾರಿಗೆ ಅಡ್ಡ ಹೋಗಿ ಕಪ್ಪುಬಟ್ಟೆ ಪ್ರದರ್ಶಿಸಿದ್ದಾರೆ. ತಕ್ಷಣ ಪೊಲೀಸರು ಅವರನ್ನು ತಡೆದಿರುವ ಘಟನೆ ವರದಿಯಾಗಿದೆ.