ಮೈಸೂರು : ಮೈಸೂರಲ್ಲಿ ದೊಡ್ಡ ವಂಚನೆ ನಡೆದಿದ್ದು, ನಕಲಿ ದಾಖಲೆಗಳನ್ನು ಸಲ್ಲಿಸಿ ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ಗೆ 23.16 ಲಕ್ಷ ರೂ. ವಂಚಿಸಲಾಗಿದೆ.ಈ ಕುರಿತು ಬ್ಯಾಂಕ್ ಮ್ಯಾನೇಜರ್ ಪ್ರತಿಭಾ ಅವರು ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಸಂಬಳ ಸೇರಿದಂತೆ ಇತರೆ ನಕಲಿ ದಾಖಲಾತಿಗಳನ್ನು ಸಲ್ಲಿಸಿ ಬ್ಯಾಂಕ್‌ನಿಂದ ಮೂವರು ಸಾಲ ಪಡೆದಿದ್ದರು. ದಾಖಲಾತಿ ಪರಿಶೀಲನೆಯ ಸಂದರ್ಭದಲ್ಲಿ ದಾಖಲೆಗಳು ನಕಲಿ ಎಂದು ಗೊತ್ತಾಗಿದೆ ಎಂದು ಮ್ಯಾನೇಜರ್ ತಿಳಿಸಿದ್ದಾರೆ.
ಕೆ.ಆರ್.ನಗರದ ಮೇಘ ಎಂಬ ಮಹಿಳೆ ನಕಲಿ ದಾಖಲೆಗಳೊಂದಿಗೆ ಇತರೆ ನಕಲಿ ದಾಖಲೆ ಸಲ್ಲಿಸಿ 9.16 ಲಕ್ಷ ರೂ. ಸಾಲ ಪಡೆದಿದ್ದರು. ಕ್ಯಾತಮಾರನಹಳ್ಳಿಯ ರವಿಕುಮಾರ್ ಎಂಬಾತ ನಕಲಿ ಬ್ಯಾಂಕ್ ವಹಿವಾಟಿನ ದಾಖಲೆಗಳನ್ನು ಸಲ್ಲಿಸಿ 8 ಲಕ್ಷ ರೂ ಸಾಲ ಪಡೆದಿದ್ದರು. ರಾಘವೇಂದ್ರ ನಗರದ ಪಿ.ದೀಪಕ್ ಎಂಬವರು ತಾನು ಖಾಸಗಿ ಕಂಪನಿಯಲ್ಲಿ ಸೇಲ್ಸ್ ಆಫೀಸರ್ ಎಂದು ಮಾಸಿಕ 22,817 ರೂ. ವೇತನ ಬರುತ್ತಿರುವುದಾಗಿ ಹೇಳಿ ಬ್ಯಾಂಕ್ ವಹಿವಾಟಿನ ನಕಲಿ ದಾಖಲೆ ಸೃಷ್ಟಿಸಿ 6 ಲಕ್ಷ ರೂ ಸಾಲ ಪಡೆದಿದ್ದರು.