ಬೆಂಗಳೂರು : ದರ್ಶನ್ ಜೈಲು ಸೇರುವ ವಿಚಾರವಾಗಿ ನಟಿ ರಮ್ಯಾ ಎಂದು ಬೆಂಗಳೂರಲ್ಲಿ ಮಾತನಾಡಿದರು. ದರ್ಶನ್ ಅವರು ತಮ್ಮ ಜೀವನ ತಾವೇ ಹಾಳು ಮಾಡಿಕೊಂಡರು. ಸಮಾಜದಲ್ಲಿ ಕಾನೂನು ಪ್ರಕಾರ ಎಲ್ಲಾ ನಡೆದುಕೊಳ್ಳಬೇಕು. ಕಾನೂನಿಗೆ ಪ್ರತಿಯೊಬ್ಬರು ಬೆಲೆ ಕೊಡಬೇಕು. ಸುಪ್ರೀಂಕೋರ್ಟ್ ತೀರ್ಪು ನನಗೆ ಸಹಜವಾಗಿ ಸಂತೋಷವಾಗಿದ್ದು ಧನ್ಯವಾದಗಳು ಹೇಳುತ್ತೇನೆ ಎಂದರು.
ನಾನು ದರ್ಶನ್ ಕೆಲಸ ಮಾಡಿದ್ದೇನೆ ತುಂಬಾ ಚೆನ್ನಾಗಿ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಬೆಳೆದಿದ್ದಾರೆ. ಒಳ್ಳೆಯ ಹೆಸರು ಕೂಡ ಮಾಡಿದ್ದರು. ನನಗೆ ಅವರ ತುಂಬಾ ಹೆಮ್ಮೆ ಇದೆ. ಆದರೆ ಇವತ್ತು ಹೀಗೆ ಆಗದೆ ಹೋಗಿದ್ದರೆ ದರ್ಶನ್ ಇನ್ನೂ ಹೆಚ್ಚು ಬೆಳೆಯುತ್ತಿದ್ದರು ಹಾಗಾಗಿ ಅವರು ತಮ್ಮ ಜೀವನ ತಾವೇ ಹಾಳು ಮಾಡಿಕೊಂಡರು. ಕಾನೂನು ಪ್ರಕಾರ ನಡೆದುಕೊಂಡರೆ ಸಮಾಜದಲ್ಲಿ ಒಳ್ಳೆಯ ದಾರಿಯಲ್ಲಿ ನಾವು ಹೋಗಬಹುದು ಹಾಗಾಗಿ ಕಾನೂನು ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಮೆಂಟ್ ಸೆಕ್ಷನ್ ಸ್ವಚ್ಛ ಭಾರತ ಆದಂತೆ ಆಗಿದೆ ಟ್ರೋಲ್ ಮಾಡಿದ ಏಳು ಜನರನ್ನು ಬಂಧಿಸಲಾಗಿದೆ. ಎಷ್ಟೋ ಜನ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾರೆ ಇನ್ನು ಹಲವರನ್ನು ಅರೆಸ್ಟ್ ಮಾಡುತ್ತೇವೆ ಅಂತ ಪೊಲೀಸರು ಹೇಳಿದ್ದಾರೆ. ಯಾವುದೇ ಕೆಟ್ಟವಾದ ಕಮೆಂಟ್ಗಳು ಈಗ ಬರುತ್ತಿಲ್ಲ ಎಂದು ರಮ್ಯಾ ತಿಳಿಸಿದರು.
ಸಿನಿಮಾಗಳು ಗೆಲ್ಲುವುದಕ್ಕೆ ದೊಡ್ಡ ಹೀರೋಗಳೆ ಬೇಕಾಗಿಲ್ಲ. ಚಿತ್ರಕಥೆ ಚೆನ್ನಾಗಿದ್ದರೆ ಫ್ಯಾಮಿಲಿ ಆಡಿಯನ್ಸ್ ಬರುತ್ತಾರೆ . ಸು ಫ್ರಮ್ ಸೊ ಚಿತ್ರದಿಂದ ಏನು ಕಲಿತಿದ್ದೇವೆ ಹೇಳಿ? ಅದರಲ್ಲಿ ಕೂಡ ಹೊಸಬರು ಇದ್ದಾರೆ. ಕಥೆ ಚೆನ್ನಾಗಿದ್ದರೆ ಸಿನಿಮಾ ಹಿಟ್ ಆಗೇ ಆಗುತ್ತದೆ. ಒಳ್ಳೆಯ ಕಥೆ ಇದರ ದೊಡ್ಡ ಹೀರೋ ದೊಡ್ಡ ಬಜೆಟ್ ಏನು ಬೇಕಾಗಲ್ಲ ಎಂದು ದರ್ಶನ್ ಗೆ ರಮ್ಯಾ ತಿರುಗೇಟು ನೀಡಿದರು.