ಹಾಸನ : ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕುರಿತು ಬಿಜೆಪಿ ಧರ್ಮಸ್ಥಳಕ್ಕೆ ಭೇಟಿ ನೀಡಿತ್ತು. ಈ ವೇಳೆ ಕಾಂಗ್ರೆಸ್ ವಿರುದ್ಧ MLC ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ದು, ಎಡಪಂಥೀಯರು ಎಲ್ಲರೂ ಸೇರಿಕೊಂಡು ಸರ್ಕಾರಕ್ಕೆ ದೂರು ಕೊಟ್ಟಿದ್ದಾರೆ. ಕಾಂಗ್ರೆಸ್ನವರು ಪಿಕ್ ಪಾಕೆಟ್ ಕಳ್ಳರಿದ್ದಂತೆ ಎಂದು ಆಕ್ರೋಶ ಹೊರಹಾಕಿದರು.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ನೀಡಿ, ಇಡೀ ರಾಜ್ಯದಲ್ಲಿ ಭಕ್ತರು ಕೋಪಗೊಂಡಿದ್ದಾರೆ. ಬೇಸರಗೊಂಡಿದ್ದಾರೆ ನಾವು ಕೂಡ ಧರ್ಮಸ್ಥಳ ಮಂಜುನಾಥನ ಭಕ್ತರೇ ಕಳಂಕ ಹೋಗಲಾಡಿಸಲು ಮಂಜುನಾಥ ದೇವರ ದರ್ಶನ ಮಾಡಿದ್ದೇವೆ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಅಂದುಕೊಂಡಿದ್ದರು ಅವರ ಜೊತೆ ನಾವಿದ್ದೇವೆ ಎಂದು ಹೇಳಿ ಬಂದಿದ್ದೇವೆ ಎಂದು ಅವರು ತಿಳಿಸಿದರು.
ಅನಾಮಿಕ ದುರುದಾರನನ್ನು ಬಿಜೆಪಿ ಸೃಷ್ಟಿಸಿದೆ ಎಂಬ ಆರೋಪ ವಿಚಾರವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆಗೆ ನಾರಾಯಣಸ್ವಾಮಿ ಗರಂ ಆಗಿದ್ದು ಕಳ್ಳರು ಯಾವಾಗಲೂ ಬೇರೆಯವರನ್ನು ಕಳ್ಳರೆಂದು ಬಿಂಬಿಸಲು ಹೋಗುತ್ತಾರೆ. ಕಾಂಗ್ರೆಸ್ನವರು ಪಿಕ್ ಪಾಕೆಟ್ ಕಳ್ಳರಿದ್ದಂತೆ. ಬುರುಡೆ ತಂದಿದ್ದು ಯಾರು ಅನಾಮಿಕ ಯಾರ ವಶದಲ್ಲಿ ಇದ್ದಾನೆ ಅನಾಮಿಕ ಕಾಂಗ್ರೆಸ್ ಹಾಗೂ ಎಡಪಂಥಿ ಹಾಗು ಕಾಂಗ್ರೆಸ್ ವಶದಲ್ಲಿ ಇದ್ದಾನೆ ಎಂದು ನಾರಾಯಣಸ್ವಾಮಿ ಕಿಡಿ ಕಾರಿದರು.