ಬೆಂಗಳೂರು : ಸಫಾರಿ ವೇಳೆ 13 ವರ್ಷದ ಬಾಲಕನ ಕೈಗೆ ಚಿರತೆ ಪರಚಿರುವ ಘಟನೆ ಬನ್ನೆರುಘಟ್ಟ ಜೈವಿಕ ಉದ್ಯಾನವನದಲ್ಲಿ ನಿನ್ನೆ ಈ ಒಂದು ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಗಾಯಗೊಂಡ ಬಾಲಕ ಬೊಮ್ಮಸಂದ್ರ ನಿವಾಸಿ ಸುಹಾಸ್ ಎಂದು ತಿಳಿದುಬಂದಿದೆ
ಪೋಷಕರ ಜೊತೆಗೆ ಬಾಲಕ ಸುಹಾಸ್ ಸಫಾರಿಗೆ ತೆರಳಿದ್ದಾಗ ಬಾಲಕನ ಕೈಗೆ ಚಿರತೆ ಪರಚಿದೆ. ಕಾರು ಬೆನ್ನಟ್ಟಿ ಬಂದು ಹಾರಿ ಬಾಲಕನ ಕೈಗೆ ಚಿರತೆ ಪರಚಿದೆ. ಮಾಂಸ ಕಿತ್ತು ಬರುವಂತೆ ಬಾಲಕನ ಕೈಗೆ ಚಿರತೆ ಪರಚಿದೆ. ಸದ್ಯ ಬಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.