ಚಿಕ್ಕಮಗಳೂರು : ಧರ್ಮಸ್ಥಳದಲ್ಲಿ ನೂರಾರು ಶುಭ ಗಳನ್ನು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಜೊತೆಗೆ ಪಂಜರ ಶೋಧ ಕಾರ್ಯ ನಡೆಸುತ್ತಿದ್ದು ಇದರ ಮಧ್ಯ ಜೈನ ಸಮುದಾಯದ ಹೆಣ್ಣು ಮಕ್ಕಳ ಕುರಿತು ಅಶ್ಲೀಲ ಕಮೆಂಟ್ ಹಾಕಿದ್ದ ಆರೋಪಿಯೊರ್ವನನ್ನು ಇದೀಗ ಚಿಕ್ಕಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಅಶ್ಲೀಲ ಕಮೆಂಟ ಹಾಕಿದ್ದ ಹೊಸಹಳ್ಳಿಯ ಉಮೇಶ್ ಎನ್ನುವ ಆರೋಪಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಅಜ್ಜಂಪುರ ಠಾಣೆ ಪೊಲೀಸ್ರಿಂದ ಉಮೇಶ್ ಬಂಧನವಾಗಿದೆ. ಉಮೇಶ್ ಗೌಡ್ಲರ್ ಎನ್ನುವವ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಅಶ್ಲೀಲವಾಗಿ ಮೆಸೇಜ್ ಹಾಕಿದ್ದ. ಜೈನ ಸಮುದಾಯದ ಹೆಣ್ಣು ಮಕ್ಕಳ ಕುರಿತು ಅಶ್ಲೀಲವಾಗಿ ಕಮೆಂಟ್ ಬರೆದಿದ್ದ ಈ ವಿಚಾರವಾಗಿ ಕಳಸ ನಿವಾಸಿ ಪದ್ಮರಾಜಯ್ಯ ಎನ್ನುವವರು ಉಮೇಶ್ ವಿರುದ್ಧ ದೂರು ನೀಡಿದ್ದರು. ಉಮೇಶ್ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.