ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಬಂಧನವಾಗಿದೆ. ಈ ಮೂಲಕ ಜೈಲುಪಾಲಾಗಲಿದ್ದಾರೆ.
ಇಂದು ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಸೇರಿದಂತೆ 7 ಪ್ರಮುಖ ಆರೋಪಿಗಳ ಜಾಮೀನು ರದ್ದು ಮಾಡಲಾಗಿದೆ. ದರ್ಶನ್ , ಪವಿತ್ರಾ ಗೌಡ, ಲಕ್ಷಣ್, ಪ್ರದೋಷ್ ಮುಂತಾದವರು ಮತ್ತೆ ಈಗ ಜೈಲು ಸೇರಬೇಕಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾದ ಬೆನ್ನಲ್ಲೇ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ 2ನೇ ಆರೋಪಿಯಾಗಿದ್ದರು. ಈಗಾಗಲೇ ಎ1 ಆರೋಪಿಯಾಗಿದ್ದಂತ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಈ ನಂತ್ರ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ನೆಲೆಸಿದ್ದಂತ ಹೊಸಕೆರೆಹಳ್ಳಿಯ ಅಪಾರ್ಮೆಂಟ್ ನಲ್ಲಿ ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೇ ಈ ಮೊದಲು ನಟ ದರ್ಶನ್ ನ್ಯಾಯಾಲಕ್ಕೆ ಶರಣಾಗಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿತ್ತು. ಆದರೇ ಇದೀಗ ನಟ ದರ್ಶನ್ ಅವರನ್ನು ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬಂಧಿಸಿದ್ದಾರೆ.