ಚಿತ್ರದುರ್ಗ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ನಟ ದರ್ಶನ್ ಮತ್ತು ಏಳು ಆರೋಪಿ ಗಳ ಜಾಮೀನು ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದೆ. ಇದೀಗ ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಸುಪ್ರೀಂ ಕೋರ್ಟ್ ತೀರ್ಪಿಗೂ ಮೊದಲೇ ಪೂಜೆ ಮಾಡಿದ್ದು, ಇದೀಗ ಅವರ ಪೂಜಾ ಫಲ ಫಲಿಸಿದೆ.
ಹೌದು ಚಿತ್ರದುರ್ಗದಲ್ಲಿ ನಟ ದರ್ಶನ್ ಜಾಮೀನು ಪ್ರಕರಣದ ಕುರಿತು ತೀರ್ಪಿಗು ಮುನ್ನ ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಪೂಜೆಗೆ ಕುಳಿತಿದ್ದರು. ತೀರ್ಪು ವೇಳೆ ರೇಣುಕಾ ಸ್ವಾಮಿ ತಂದೆ ಪೂಜೆಗೆ ಕುಳಿತಿದ್ದರು. ರೇಣುಕಾ ಸ್ವಾಮಿಯ ತಂದೆ ಕಾಶಿನಾಥ ಅವರು ತೀರ್ಪುಗೆ ಮೊದಲೇ ಲಿಂಗ ಪೂಜೆ ಮಾಡಿದ್ದರು. ಸುಪ್ರೀಂ ಕೋರ್ಟ್ ನಟ ದರ್ಶನ್ ಜಾಮೀನು ರದ್ದು ಗೊಳಿಸುವ ಆದೇಶ ಪ್ರಕಟಿಸುತ್ತಿದ್ದಂತೆ ರತ್ನಾಪ್ರಭ ತಮ್ಮ ಪತಿ ಕಾಶಿನಾಥಯಗೆ ತಿಳಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಶಿನಾಥಯ್ಯ, ಈ ದಿನ ದರ್ಶನ್ ಬೇಲ್ ಅಪ್ಲಿಕೇಶನ್ ಸುಪ್ರೀಂ ಕೋರ್ಟ್ ರದ್ದಾಗಿದೆ. ಅವರನ್ನು ಮತ್ತೆ ಜೈಲಿಗೆ ಕಳುಹಿಸಿದ್ದು, ನಮಗೆ ನ್ಯಾಯದ ಮೇಲೆ ಇನ್ನೂ ಹೆಚ್ಚಿನ ನಂಬಿಕೆ ಬಂದಿದೆ. ಹೈಕೋರ್ಟ್ ನಲ್ಲಿ ಅವರಿಗೆ ಬೇಲ್ ಸಿಕ್ಕಾಗ ನಮಗೆ ಆತಂಕ ಇತ್ತು. ಆದರೆ ಸರ್ಕಾರದವರು ದೊಡ್ಡ ಮನಸು ಮಾಡಿ ವಿಶೇಷ ತನಿಖೆ ಎಂದು ಸುಪ್ರೀಂ ಕೋರ್ಟಿಗೆ ಜಾಮೀನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಇದೀಗ ನ್ಯಾಯಮೂರ್ತಿಗಳು ಜಾಮೀನು ರದ್ದುಗೊಳಿಸಿದೆ. ಸರ್ಕಾರದ ಬಗ್ಗೆ ಮತ್ತು ನ್ಯಾಯಾಂಗದ ಬಗ್ಗೆ ನಮಗೆ ಇನ್ನೂ ಹೆಚ್ಚು ವಿಶ್ವಾಸ ನಂಬಿಕೆ ಇದೆ ಎಂದು ಕಣ್ಣೀರಿಡುತ್ತಾ ಹೇಳಿದರು.