ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ ಐ ಟಿ ಅಧಿಕಾರಿಗಳು ಜೋರಾದ ಮಳೆಯ ನಡುವೆಯೂ ಕೂಡ 13ನೇ ಪಾಯಿಂಟ್ ನಲ್ಲಿ ಅಸ್ತಿಪಂಜರಕ್ಕಾಗಿ ಜಿಪಿಆರ್ ಬಳಸಿ ಶೋಧ ನಡೆಸುತ್ತಿದೆ. ಆದರೆ ಇದೀಗ ಘಟನ ಸ್ಥಳಕ್ಕೆ ಮತ್ತೆ ಇಬ್ಬರು ಹೊಸ ಸಾಕ್ಷಿದಾರರು ಬಂದಿದ್ದು ಪಾಂಡುರಂಗ ಮತ್ತು ತುಕಾರಾಮ ಗೌಡ ಎನ್ನುವ ಹೊಸ ಸಾಕ್ಷಿದಾರರು ಭೇಟಿ ಕೊಟ್ಟಿದ್ದಾರೆ.
2009ರಲ್ಲಿ ನಾವು ಶವಗಳನ್ನು ಓದು ಹಾಕಿರುವುದು ನೋಡಿದ್ದೇವೆ. ಎಸ್ಐಟಿ ತನಿಖೆ ಮಾಡುತ್ತಿರುವ ವಿಚಾರ ತಿಳಿದು ನಾವು ಬಂದಿದ್ದೇವೆ. ಸಹಾಯವಾಣಿ ತೆರೆದ ಕೂಡಲೇ ನಾವು ಎಸ್ಐಟಿ ಕಚೇರಿಗೆ ದೂರು ನೀಡಿದ್ದೇವೆ. ನಾವು ನೋಡಿದವನು ಬೇರೆ ಇವನು ಶವ ಹೂತು ಹಾಕಿಲ್ಲ. ಈತನನ್ನು ನಾವು ನೋಡೇ ಇಲ್ಲ. ಬೇರೆ ಯಾರೋ ಶವಗಳನ್ನು ಹೂತು ಹಾಕಿರುವುದನ್ನು ನೋಡಿದ್ದೇವೆ. ಆದರೆ ಅವರ ಪರಿಚಯ ಇಲ್ಲ ಎರಡು ಮೂರು ಜನರು ಶವಗಳನ್ನು ಹೂತು ಹಾಕಿರುವುದನ್ನು ನೋಡಿದ್ದೇವೆ ಎಂದು ತುಕಾರಾಂ ಗೌಡ ತಿಳಿಸಿದರು.
ಈಗ ಗುರುತು ಹಾಕಿರುವ ಸ್ಥಳದಲ್ಲಿ ಶವ ಹೂತು ಹಾಕಿಲ್ಲ ಎಸ್ ಐ ಟಿ ಅಧಿಕಾರಿಗಳು ಕೇಳಿದರೆ ನಾವು ಶವ ಹೂತು ಹಾಕಿರುವ ಸ್ಥಳ ತೋರಿಸಲು ತಯಾರಿದ್ದೇವೆ ನಾನು ಒಂದು ಸಲ ಮಾತ್ರ ಆ ಸ್ಥಳದಲ್ಲಿ ಶವ ಹೂತು ಹಾಕಿರುವುದನ್ನು ಕಣ್ಣಾರೆ ನೋಡಿದ್ದೇನೆ. ಎಷ್ಟು ಶವ ಹೂತು ಹಾಕಿದ್ದಾರೆ ಅನ್ನುವುದು ನನಗೆ ಗೊತ್ತಿಲ್ಲ ಎಂದು ತುಕಾರಾಂ ತಿಳಿಸಿದರು.