ಬೆಂಗಳೂರು :ಚಿಕ್ಕಮಗಳೂರಿನ ತರೀಕೆರೆಯ ಶಿವಶರಣೆ ಅಕ್ಕನಾಗಮ್ಮನವರ ಸಮಾಧಿಯನ್ನು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು. ತರೀಕೆರೆ ಪಟ್ಟಣದ 12 ನೇ ಶತಮಾನದ ಅಕ್ಕನಾಗಮ್ಮನವರ ಸಮಾಧಿಯನ್ನು ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು, ಅವಶೇಷಗಳ ಅಧಿನಿಯಮ 1961 ಕಲಂ 23 ರ ಅಡಿಯೊಳಗೆ ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡಲು ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನ ತರೀಕೆರೆಯ ಶಿವಶರಣೆ ಅಕ್ಕನಾಗಮ್ಮನವರ ಸಮಾಧಿಯನ್ನು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಿಸಲು ಕ್ರಮ
– @HKPatilINC , ಕಾನೂನು ಸಚಿವರು pic.twitter.com/5x5f3cYgFI
— DIPR Karnataka (@KarnatakaVarthe) August 13, 2025