ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ಮಾಸ್ಕ್ ಮ್ಯಾನ್ ದೂರು ವಿಚಾರ ಸಂಬಂಧ ಇದೀಗ ಬೆಳ್ತಂಗಡಿ ಎಸ್ ಐಟಿ ಕಚೇರಿಗೆ ಮತ್ತಿಬ್ಬರು ಸಾಕ್ಷಿದಾರರು ಆಗಮಿಸಿದ್ದಾರೆ.
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ಹೇಳಿದ್ದ ಅನಾಮಿಕ ದೂರುದಾರ ಪರಿಚಯ ತಮಗೆ ಇರುವುದಾಗಿ ಹೇಳಿದ್ದ ಇಬ್ಬರು ಸಾಕ್ಷಿದಾರರು ಇಂದು ಹೇಳಿಕೆ ದಾಖಲಿಸಲು ಎಸ್ ಐಟಿ ಕಚೇರಿಗೆ ಆಗಮಿಸಿದ್ದಾರೆ. ಅನಾಮಿಕ ಹೆಣ ಹೂತಿದ್ದನ್ನು ನೋಡಿದ್ದೇವೆ ಎಂದು ಸಾಕ್ಷಿದಾರರು ಹೇಳಿದ್ದರು.
ಇನ್ನೂ ಧರ್ಮಸ್ಥಳದಲ್ಲಿ ಸುಮಾರು 30 ಕಡೆ 300 ಹೆಣ ಹೂತಿದ್ದೇನೆ. ಅಲ್ಲೂ ಶೋಧ ನಡೆಸಿ ಎಂದು ಅನಾಮಿಕ ದೂರುದಾರ ಎಸ್ ಐ ಟಿ ಗೆ ಹೇಳಿದ್ದಾನೆ ಎನ್ನಲಾಗಿದೆ. ನಿನ್ನೆ ಎಸ್ಐಟಿಯಿಂದ 13ನೇ ಪಾಯಿಂಟ್ ನಲ್ಲಿ ಉತ್ಕನನ ಕಾರ್ಯವನ್ನು ನಡೆಸಲಾಯಿತು. ಸುಮಾರು 18 ಅಡಿ ಆಳ ತೆಗೆದರೂ ಯಾವುದೇ ಅಸ್ಥಿ ಪಂಜರ ಪತ್ತೆಯಾಗಿಲ್ಲ. ಹೀಗಾಗಿ ಇಂದಿನ ಉತ್ಕನನ ಕಾರ್ಯವನ್ನು ಎಸ್ಐಟಿ ಮುಕ್ತಾಯಗೊಳಿಸಿದೆ.