ಬೆಂಗಳೂರು : ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಬೆಂಗಳೂರಲ್ಲಿ ಮಹಿಳಾಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮೊಬೈಲ್ ಕಿತ್ತುಕೊಂಡು ದುಷ್ಕರ್ಮಿಯ ಪರಾರಿಯಾಗಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಅಗಸ್ಟ್11ರಂದು ಜುಡಿಶಿಯಲ್ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದ್ದು ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. 15 ದಿನಗಳ ಹಿಂದೆ ಶ್ರೀನಿವಾಸ್ ಲೇಡೀಸ್ ಪಿಜಿಯಲ್ಲಿ ಮಹಿಳೆ ಸೇರಿದ್ದಳು. ಬೆಸ್ಕಾಂ ನಲ್ಲಿ ಮಹಿಳೆ ಅಸಿಸ್ಟೆಂಟ್ ಎಂಜಿನಿಯರಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 11ರಂದು ಕೆಲಸ ಮುಗಿಸಿ ಮಹಿಳೆ ಪಿಜಿಗೆ ಬಂದಿದ್ದಾಗ ಈ ಒಂದು ಘಟನೆ ನಡೆದಿದ್ದು, ಮೊಬೈಲ್ ಕಿತ್ತುಕೊಂಡು ದುಷ್ಕರ್ಮಿ ಪರಾರಿಯಾಗಿದ್ದಾನೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.