ಬೆಂಗಳೂರು : ಬೆಂಗಳೂರು : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ನಟಿ ರಮ್ಯಾಗೆ ಅಶ್ಲೀಲ ಸಂದೇಶ, ಬೆದರಿಕೆ ಕೇಸ್ನಲ್ಲಿ ಸಂತೋಷ್ ಎಂಬ ದರ್ಶನ್ ಅಭಿಮಾನಿಯ ಬಂಧನವಾಗಿದೆ. ವಿಜಯಪುರ ಮೂಲದ ಆರೋಪಿ ಸಂತೋಷ ವಿಜಯಪುರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪಿ ನಮ್ ಬಾಸ್ ತಂಟೆಗೆ ಬರಬೇಡ ಎಂದು ಕೆಟ್ಟ ಪದ ಬಳಸಿದ್ದ ಎನ್ನಲಾಗಿದೆ. ಸದ್ಯ ಐಪಿ ಅಡ್ರೆಸ್ ಮೂಲಕ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಆರೋಪಿ ಬಂಧಿಸಿದ್ದಾರೆ.
ನಟಿ ರಮ್ಯಾ ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಸಿಸಿಬಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ನಟಿ ರಮ್ಯಾ ಗೆ ಮೆಸೇಜ್ ಮಾಡಿದ್ದ ಒಟ್ಟು 48 ಜನರ ಐಪಿ ಅಡ್ರೆಸ್ ಗಳನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ ಇದುವರೆಗೂ ಒಟ್ಟು 15 ಜನರನ್ನು ಗುರುತಿಸಿದ್ದು, ನಾಲ್ವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಮಾಜಿ ಸಂಸದೆ ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ ಮಾಡಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ ಒಟ್ಟು 48 ಜನರ ಐಪಿ ಅಡ್ರೆಸ್ ಅನ್ನು ಸಿಸಿಬಿ ತಂಡ ಇದೀಗ ಪತ್ತೆ ಹಚ್ಚಿದೆ. ಈ ಬಗ್ಗೆ 15 ಜನರನ್ನು ಗುರುತಿಸಲಾಗಿದ್ದು ನಾಲ್ವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಶ್ಲೀಲವಾಗಿ ಪೊಲೀಸರು ಕಮೆಂಟ್ ಮಾಡಿದವರಿಗೆ ಇದೀಗ ಬಿಸಿ ಮುಟ್ಟಿಸುತ್ತಿದ್ದಾರೆ.