ರಾಯಚೂರು : ಮಂತ್ರಾಲಯದ ರಾಘವೇಂದ್ರ ಶ್ರೀಗಳ 354ನೇ ಆರಾಧನಾ ಮಹೋತ್ಸವಕ್ಕೆ ಇಂದು ಬೆಳಗ್ಗೆಯಿಂದಲೇ ಶ್ರೀಗುರುರಾಯರ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಯರ ಉತ್ತರಾಧಾನೆ ದಿನ ಮಠದ ರಥಬೀದಿ ಪ್ರಾಂಗಣದಲ್ಲಿ ನೆರವೇರುವ ಮಹಾರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.
ಇದೇ ಸಂದರ್ಭದಲ್ಲಿ ಮಂತ್ರಾಲಯದಲ್ಲಿ ಗೋಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ. ಇಂದು ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್ ನಿಂದ ಮಂತ್ರಾಲಯದ ಗೋಶಾಲೆಯಲ್ಲಿ ಬೆಂಕಿ ತಗುಲಿದ್ದು, ಗೋಶಾಲೆಯಲ್ಲಿದ್ದ ಬಣವೆಗಳಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಗೋಶಾಲೆ ಸುಟ್ಟು ಬಸ್ಮವಾಗಿದೆ ಆದರೆ ಅದೃಷ್ಟವಶಾತ್ ಗೋಶಾಲೆಯಲ್ಲಿದ್ದ ಎಲ್ಲಾ ಹಸುಗಳು ಪ್ರಾಣಾಪಾಯದಿಂದ ಪಾರಾಗಿವೆ ಎಂದು ತಿಳಿದುಬಂದಿದೆ.