ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ, ನಿನ್ನೆ ಈ ಒಂದು ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೂಡ ಎಂಟ್ರಿ ಕೊಟ್ಟಿದೆ. ಇದೀಗ ರಾಷ್ಟ್ರ ಮಾನವ ಹಕ್ಕುಗಳ ಆಯೋಗವು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿದೆ.
ಹೌದು ಧರ್ಮಸ್ಥಳ ಪ್ರಕರಣ ಇಡೀ ದೇಶದಾದ್ಯಂತ ಭಾರಿ ಸುದ್ದಿ ಮಾಡಿದ್ದು, ಇದೀಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ರಕರಣದ ಕುರಿತು ಸುಮೊಟೊ ಕೇಸ್ ದಾಖಲಿಸಿಕೊಂಡಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಎನ್ಎಚ್ಆರ್ಸಿ ಕಾರ್ಯಚರಣೆ ನಡೆಸಿದ್ದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕಾರ್ಯಾಚರಣೆ ನಡೆಸಿದೆ SIT ಪೊಲೀಸ್ ಠಾಣೆ, ಧರ್ಮಸ್ಥಳ ಠಾಣೆಗೂ ಇದೀಗ ಭೇಟಿ ನೀಡಿದೆ ಗ್ರಾಮ ಪಂಚಾಯಿತಿಯಿಂದ ದಾಖಲೆ ಪಡೆದಿದೆ.