ಬೆಂಗಳೂರು : ಪಕ್ಷಕ್ಕೆ ಮುಜುಗರ ನೀಡುವಂತಹ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆಯ ಮೇರೆಗೆ ಇದೀಗ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ಕೆ.ಎನ್ ರಾಜಣ್ಣ ರಾಜೀನಾಮೆ ಸಲ್ಲಿಸಿದ್ದಾರೆ.
ಈ ವಿಚಾರವಾಗಿ ಸದನದಲ್ಲಿ ವಿಪಕ್ಷ ನಾಯಕರು ಚರ್ಚೆ ಮಾಡುತ್ತಿದ್ದರು ಆಗ ಸಚಿವ ಏನ್ ರಾಜಣ್ಣ ಅವರು, ಕೀಳುಮಟ್ಟದ ರಾಜಕಾರಣ ಮಾಡುತ್ತಿರುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ನಾನು ರಾಜೀನಾಮೆ ಕೊಟ್ಟಿದ್ದೇನೋ ಬಿಟ್ಟಿದ್ದೇನೋ ಬೇರೆಯ ವಿಚಾರ ನನ್ನ ರಾಜೀನಾಮೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಸಂಸದೀಯ ಸಚಿವರ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ರಾಜೀನಾಮೆ ವಿಚಾರ ಮಾತನಾಡುವ ಆರ್ ಅಶೋಕಗೆ ನಾಚಿಕೆ ಆಗಬೇಕು ಎಂದು ಸಚಿವ ಕೆ ಎನ್ ರಾಜಣ್ಣ ವಿಪಕ್ಷ ವಿರುದ್ಧ ವಾಗ್ದಾಳಿ ನಡೆಸಿದರು.