ಬೆಳಗಾವಿ : ಬೆಳಗಾವಿಯಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು,ಯುವತಿಯನ್ನು ಚುಡಾಯಿಸಿದಕ್ಕೆ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ನಡೆದಿದೆ.
ಬೈಕ್ ನಲ್ಲಿ ವಿಠಲ ಲಕ್ಷ್ಮಣ ನಾಯ್ಕರ್ (39) ಎನ್ನುವ ಯುವಕನನ್ನು ಅಪಹರಿಸಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ವಿಠ್ಠಲ ಲಕ್ಷ್ಮಣ ನಾಯ್ಕರಿಗೆ ಗ್ಯಾಸ್ ಪೈಪ್ ಮತ್ತು ಹಗ್ಗದಿಂದ ದುಷ್ಕರ್ಮಿಗಳ ಗ್ಯಾಂಗ್ ಹಿಗ್ಗಾಮುಗ್ಗ ಥಳಿಸಿದೆ. ಘಟನೆ ಕುರಿತಂತೆ ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದೆ.