ಬೆಂಗಳೂರು : ಸೂರ್ಯ ಸಿಟಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಒಬ್ಬರು ಸಾವನಪ್ಪಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮೂಲದ ದೀಪ (30)ಸಾವನಪ್ಪಿದ್ದಾರೆ. ಪತಿ ಉದಯ ಮತ್ತು ಆತನ ತಾಯಿ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದ್ದು, ನನ್ನ ಮಗಳ ಮೇಲೆ ಹಲ್ಲಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಗೃಹಿಣೀಯ ಪೋಷಕರು ಮತ್ತು ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ.
ಕಳೆದ 12 ವರ್ಷದ ಹಿಂದೆ ಉದಯ ಜೊತೆಗೆ ದೀಪ ಮದುವೆ ಆಗಿತ್ತು. ಜಮೀನು ಮಾರಿ ಲಕ್ಷಾಂತರ ಹಣ ಮತ್ತು ಚಿನ್ನಾಭರಣ ನೀಡಿ ಮದುವೆ ಮಾಡಲಾಗಿತ್ತು. ಉದಯ್ ಜೊತೆಗೆ ದೀಪ ಅದ್ದೂರಿ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು ಎಲ್ಲವೂ ಚೆನ್ನಾಗಿತ್ತು. ಇತ್ತೀಚಿಗೆ ಪತಿ ಉದಯ್ ಬ್ಯೂಟಿ ಪಾರ್ಲರ್ ಆಂಟಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಚಾರವಾಗಿ ದೀಪಾ ಮತ್ತು ಉದಯ ನಡುವೆ ವೈ ಮನಸು ಉಂಟಾಗಿತ್ತು.
ಅಕ್ರಮ ಸಂಬಂಧ ವಿಚಾರ ಹಿರಿಯರ ಗಮನಕ್ಕೂ ಬಂದಿತ್ತು. ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಮಾತುಕತೆ ನಡೆದಿತ್ತು. ಆಗಸ್ಟ್ 6 ರಂದು ಪತಿ ಉದಯ್ ದೊಣ್ಣೆಯಿಂದ ದೀಪ ಮೇಲೆ ಹಲ್ಲೆ ನಡೆಸಿದ್ದ. ಎಲ್ಲಾದರೂ ಹೋಗಿ ಸಾಯಿ ಎಂದು ಪತಿ ಹಲ್ಲೆ ಮಾಡಿದ್ದ. ಇದರಿಂದ ದೀಪ ಮನನೊಂದು ಕ್ರಿಮಿನಾಶಕ ಔಷಧಿ ಸೇವಿಸಿದ್ದರು. ಆಗಸ್ಟ್ 9ರಂದು ಚಿಕಿತ್ಸೆ ಫಲಕಾರಿಯಾಗದೆ ಗ್ರಹಿಣಿ ದೀಪ ಸಾವನಪ್ಪಿದ್ದಾರೆ ಘಟನೆ ಸಂಭಂದ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.