ಲಖನೌ: ದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು,ಯುವಕನೊಬ್ಬ ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಲಖನೌದ ಗೋಮತಿ ನಗರದಲ್ಲಿ ನಡೆದಿದೆ.
ಸ್ಥಳೀಯರ ಪ್ರಕಾರ ಪತ್ರಕರ್ಪುರ ಪ್ರದೇಶದ ಯುವಕನೊಬ್ಬ ನಾಯಿಯನ್ನು ಕರೆದು ಅದಕ್ಕೆ ಆಹಾರ ನೀಡಿದ್ದಾನೆ. ನಾಯಿ ಅವನ ಬಳಿ ಬಂದ ನಂತರ, ಅವನು ಅದರ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸ್ಥಳೀಯರು ಗಮನಿಸಿ ಕಿರುಚಿದಾಗ ಯುವಕ ಓಡಿಹೋದನು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಿಸಿದ ಆಸ್ರಾ ದಿ ಹೆಲ್ಪಿಂಗ್ ಹ್ಯಾಂಡ್ಸ್ ಎಂಬ ಸಂಘಟನೆಯು ಸ್ಥಳೀಯ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ರಿಮಾಂಡ್ಗೆ ಕಳುಹಿಸಿದ್ದಾರೆ. ಪೊಲೀಸರು ಆತನನ್ನು ಸೋನು ವಿಶ್ವ ಕರ್ಮ (24) ಎಂದು ಗುರುತಿಸಿದ್ದಾರೆ.