ಬೆಂಗಳೂರು : ಧರ್ಮಸ್ಥಳದಲ್ಲಿ ಮಾಸ್ಕ್ ಮ್ಯಾನ್ ತೋರಿಸಿದ ಜಾಗದಲ್ಲಿ ಈಗಾಗಲೇ ಅಧಿಕಾರಿಗಳು ಅಸ್ತಿಪಂಜರಕ್ಕಾಗಿ ಶೋಧ ನಡೆಸಿದ್ದಾರೆ. ಇದೀಗ ಇಂದು ಮಾಸ್ಕ್ ಮ್ಯಾನ್ ತೋರಿಸಿದ ಜಾಗದಲ್ಲಿ ಹೋಗಿ ನೇರವಾಗಿ ಪಾಯಿಂಟ್ ಸಹ ಮಾಡದೆ ಎಸ್ಐಟಿ ಅಧಿಕಾರಿಗಳು ಅಗೆಯಲು ನಿರ್ಧರಿಸಿದ್ದಾರೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿಯವರು 4 ವರ್ಷ ಅಧಿಕಾರದಲ್ಲಿದ್ದರೂ ಸಹ ಧರ್ಮಸ್ಥಳದ ಕುರಿತು ಯಾಕೆ ತನಿಖೆ ನಡೆಸಲಿಲ್ಲ ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ತನಿಖೆಯಾಗಲಿ ತಪ್ಪಿದ್ದಸ್ಥರಿಗೆ ಶಿಕ್ಷೆ ಆಗಲಿ ಈ ವಿಚಾರದಲ್ಲಿ ನಮ್ಮ ಸರ್ಕಾರ ಅತ್ಯಂತ ಪಾರದರ್ಶಕವಾಗಿದೆ. ಈ ಹಿಂದೆ ಸಿಬಿಐ ತನಿಖೆಗೆ ಕೊಡಲಾಗಿತ್ತು. ಈಗ ಎಸ್ಐಟಿಗೆ ಕೊಡಲಾಗಿದೆ. ಬಿಜೆಪಿ ಅವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರು ಧರ್ಮಸ್ಥಳ ಪ್ರಕರಣ ಏಕೆ ತನಿಖೆ ಮಾಡಿಸಲಿಲ್ಲ? ಈಗ ತನಿಖೆ ಆಗುತ್ತಾ ಇದೆ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಬಿಜೆಪಿ ಅವರ ಮಾತಿಗೆ ಬೆಲೆ ಕೊಡೋಕೆ ಹೋಗಬೇಡಿ. ತನಿಖೆ ನಡೆಯುತ್ತಿರುವಾಗ ಆ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ ಎಂದು ವಿಧಾನಸೌಧದಲ್ಲಿ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದರು.