ಬೆಂಗಳೂರು : ನಿನ್ನೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಿ, 3 ವಂದೇ ಭಾರತ್ ರೈಲುಗಳಿಗೆ ಹಾಗೂ ಬೆಂಗಳೂರಿನ ಆರ್ ವಿ ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ ಮೆಟ್ರೋ ರೈಲು ಉದ್ಘಾಟಿಸಿದರು. ಈ ವೇಳೆ ಮೆಟ್ರೋ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟನೆಯಾದ ಬಳಿಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಬೆಂಗಳೂರಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದು, ಅದಕ್ಕೆ ಪ್ರಧಾನಿ ಮೋದಿ ಅವರು ಸ್ಪಂದಿಸಿದ್ದಾರೆ ಎಂದು ಉಪಮುಖ್ಯಮಂತ್ರಿಗೆ ಶಿವಕುಮಾರ್ ತಿಳಿಸಿದರು.
ಪ್ರಧಾನಿಗೆ ಏನು ಮನವಿ ಮಾಡಬೇಕಿತ್ತು ಅದನ್ನು ಮಾಡಿದ್ದೇನೆ ಪ್ರಧಾನಿ ಮೋದಿ ನನ್ನ ಮನವಿಗೆ ನೋಡುತ್ತೇನೆ ಅಂತ ಹೇಳಿದ್ದಾರೆ ಬೆಂಗಳೂರು ವಿಚಾರ ಏನು ಎಷ್ಟು ಮುಖ್ಯ ಅಂತ ಗೊತ್ತು ನಾನು ಬೆಂಗಳೂರು ಮಿನಿಸ್ಟರ್ ಬೆಂಗಳೂರು ಕಾರ್ಯಕ್ರಮ ಇತ್ತು ಕಾರ್ಯಕ್ರಮದಲ್ಲಿ ನಾನು ಸ್ವಾಗತ ಮಾಡಬೇಕಾಗಿತ್ತು ಅದು ರದ್ದಾಯಿತು. ಕಾರ್ಯಕ್ರಮದಲ್ಲಿ ರೈಲ್ವೆ ಸಚಿವರ ಮೂಲಕ ಸ್ವಾಗತ ಮಾಡಿಸಿದರು. ಅದಕ್ಕೆ ನಾನು ಮಾತಾಡೋದು ಹೋಯಿತು ಎಂದರು.
ಭಾರತವನ್ನು ಬೆಂಗಳೂರು ಮೂಲಕ ನೋಡಬೇಕೆಂದು ಒಪ್ಪಿಕೊಂಡಿದ್ದಾರೆ ನಾನು ಹೆಸರು ಹೇಳುವುದಿಲ್ಲ ಪಾರ್ಲಿಮೆಂಟ್ನಲ್ಲಿ ಕುರಿತು ಮಾತನಾಡಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಅನುದಾನದ ತಂದು ಕೊಡಿ ಎಂದಿದ್ದೆವು. ಬಿಜೆಪಿಯವರು ಮಾಡಿಲ್ಲ ಬೆಂಗಳೂರಿಗೆ ಏನು ತಂದಿಲ್ಲ ಅದಕ್ಕೆ ನಾನು ಮನವಿ ಮಾಡಿದ್ದೇನೆ ಅವರು ಭರವಸೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಇನ್ನು ಲೋಕಸಭೆ ಚುನಾವಣೆಯ ವೇಳೆ ಮತಗಳ್ಳತನ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ನೀಡಿರುವ ವಿಚಾರವಾಗಿ ನೋಟಿಸ್ ಕೊಡಲು ಅವರು ಯಾರು? ನಾವು ನೋಟಿಸ್ ಕೊಟ್ಟಿದ್ದು ಕೊಡಬೇಕು ಕೊಡಲಿ ನಮಗೆ ನೀವು ನೋಟಿಸ್ ಕೊಡುವುದಕ್ಕೆ ಹಕ್ಕಿಲ್ಲ ಕಾನೂನು ಮೂಲಕ ನೋಡುತ್ತೇವೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.