ಬೆಂಗಳೂರು : ಬೆಂಗಳೂರು ಟೆಕ್ ಸಮೀಟ್-2025 ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಅಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದರು. ಐಟಿ ಬಿಟಿ ಕಂಪನಿಗಳ ಸಿಇಒಗಳ ಜೊತೆಗೆ ಸಿಎಂ ಮತ್ತು ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದರು. ಸಚಿವ ಪ್ರಿಯಾಂಕ್ ಖರ್ಗೆ ಎಲ್ಲ ಐಟಿ ಬಿಟಿ ಕಂಪನಿಗಳ ಸಿಇಒಗಳು ಭಾಗಿಯಾಗಿದ್ದಾರೆ.
ಬೆಂಗಳೂರು ಟೆಕ್ ಸಮಿಟ್-2025 ನವೆಂಬರ್ 18 ರಿಂದ 20 ರವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಶೃಂಗಸಭೆಯು ಕೃತಕ ವಿಜ್ಞಾನ, ಸೆಮಿಕಂಡಕ್ಟರ್ಸ್, ಆರೋಗ್ಯ ಮತ್ತು ಹವಾಮಾನ ತಂತ್ರಜ್ಞಾನಗಳಲ್ಲಿನ ಅನ್ವೇಷಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಸಮಿಟ್ ಭವಿಷ್ಯೀಕರಿಸುವ (Futurize) ವಿಷಯವನ್ನು ಆಧರಿಸಿದೆ. 27ನೇ ಬೆಂಗಳೂರು ಟೆಕ್ ಸಮಿಟ್-2025 ರ ಹಿನ್ನೆಲೆಯಲ್ಲಿ ‘ಬ್ರಿಜ್ ಟು ಬೆಂಗಳೂರು ತಂತ್ರಜ್ಞಾನಕ್ಕಾಗಿ ಜಾಗತಿಕ ನಾವೀನ್ಯತಾ ಮೈತ್ರಿ’ ಕಾರ್ಯಕ್ರಮವು ನಡೆಯಿತು. 60 ದೇಶಗಳ ಪ್ರತಿನಿಧಿಗಳು ತಂತ್ರಜ್ಞಾನ ಶೃಂಗಸಭೆ-25 ರಲ್ಲಿ ಭಾಗವಹಿಸಲಿದ್ದಾರೆ.