ಬೆಂಗಳೂರು : ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ವಿರುದ್ದ ಮುಂಬೈನ ಅಂಬೋಲಿ ಪೊಲೀಸರಿಂದ ಎಫ್ ಐಆರ್ ದಾಖಲಾಗಿದೆ.
ಸಿನಿಮಾ ನಿರ್ದೇಶಕ ರಾಘವೇಂದ್ರಗೆ ವಂಚಿಸಿದ್ದ ಆರೋಪ ಪ್ರಕರಣ ಸಂಬಂಧ ಮುಂಬೈನ ಅಂಬೋಲಿ ಪೊಲೀಸರು ನಟ ಧ್ರುವ ಸರ್ಜಾ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ನಟ ಧ್ರುವ ಸರ್ಜಾ ಅವರು ನಿರ್ದೇಶಕರಿಂದ 3.15 ಕೋಟಿ ರೂ. ಪಡೆದು ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ.
ಹೊಸ ಸಿನಿಮಾದ ಶೂಟಿಂಗ್ ಗೆ ಬರುವುದಾಗಿ 3.15 ಕೋಟಿ ಅಡ್ವಾನ್ಸ್ ಹಣ ಪಡೆದು ಶೂಟಿಂಗ್ ಗೆ ಬರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.